ಭಾರತ್ ಬ್ಯಾಂಕ್ ಹಂಪನಕಟ್ಟೆ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನ

0
24

ಬ್ಯಾಂಕಿನ ಅಭಿವೃದ್ಧಿಗೆ ಗ್ರಾಹಕರ ಬೆಂಬಲ ಅಪಾರ : ನ್ಯಾಯವಾದಿ ರೋಹಿಣಿ ಸಾಲ್ಯಾನ್

ಮಂಗಳೂರು : ಭಾರತ್ ಬ್ಯಾಂಕ್ ಮುಂಬೈ ಇದರು ಮಂಗಳೂರಿನ ಹಂಪನ್ಕಟ್ಟೆಯ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಾಚರಣೆಯ ಅಂಗವಾಗಿ ಕೆಕ್ ಕತ್ತರಿಸಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಮಾಜಿ ಉಪಕಾರ್ಯಧ್ಯಕ್ಷ ನ್ಯಾಯವಾದಿ ರೋಹಿಣಿ ಸಾಲ್ಯಾನ್ ಮಾತನಾಡಿ ಬ್ಯಾಂಕಿನ ವ್ಯವಹಾರದ ಅಭಿವೃದ್ಧಿ ಅಂದಾಗ ಬಹಳ ಸಂತೋಷವಾಗುತ್ತದೆ ಆಡಳಿತ ಮಂಡಳಿ ಸಿಬ್ಬಂದಿ ವರ್ಗದವರ ಸೇವಾ ಕಾರ್ಯಗಳು ಶ್ಲಾಘನೀಯ. ಗ್ರಾಹಕರು .ಹಿತೈಷಿಗಳು. ಬೆಂಬಲ ಅಪಾರವಾಗಿದೆ ಬ್ಯಾಂಕನ್ನು ಭದ್ರವಾಗಿ ರೂಪಿಸುವಲ್ಲಿ ಎಲ್ಲರೂ ಸಹಕರಿಸುವುದು ಅಗತ್ಯ ಎಂದರು.

ಈ ಸಂದರ್ಭದಲ್ಲಿ ಗೋಕರ್ಣನಾಥ ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಜೈರಾಜ್, ಕೋಶಧಿಕಾರಿ ನ್ಯಾಯವಾದಿ ಪದ್ಮರಾಜ್ ಆರ್ ಪೂಜಾರಿ.ಹಿರಿಯ ಗ್ರಾಹಕಾರದ ಶಂಕರ್ ಸುವರ್ಣ ಕುದ್ರೋಳಿ , ಬ್ಯಾಂಕ್‌ಗಳ ಪ್ಯಾನಲ್ ಮೌಲ್ಯಮಾಪಕ ಅಶೋಕ್ ಕುಮಾರ್, ರವಿಶಂಕರ್ ಮಿಜಾರ್, ಸಂದೇಶ್ ಎಂ, ನಮ್ಮ ಕುಡ್ಲ ದ ಆಡಳಿತ ನಿರ್ದೇಶಕ ಲೀಲಕ್ಷ ಕರ್ಕೇರ ಮತ್ತಿತರ ಉದ್ಯಮಿಗಳು ಹಿರಿಯ ಗ್ರಾಹಕರು ಪಾಲ್ಗೊಂಡು ಶುಭ ಹಾರೈಸಿದರು.

ಬ್ಯಾಂಕಿನ ಶಾಖೆಯ ಮುಖ್ಯ ಪ್ರಬಂಧಕಿ ಹೇಮಲತಾ ಎ ಸುವರ್ಣ.ಉಪ ಪ್ರಬಂಧಕ ಹರ್ಷ ಕರ್ಕೇರ.ಶಾಖಾಧಿಕಾರಿ ಸ್ಮಿತಾ ಮತ್ತು ಮಿಥಾಲಿ. ಸಿಬ್ಬಂದಿ- ನಿಶಾ, ಪ್ರಥ್ವಿ, ನಮಿತ, ವಿದ್ಯಾ, ಅಮಿತ, ಯೋಗೀಶ್, ಸೂರಜ್ ಆಗಮಿಸಿದ ಗ್ರಾಹಕರನ್ನು ಹಿತೈಷಿಗಳನ್ನು ಸ್ವಾಗತಿಸಿ ಗೌರವಿಸಿದರು.