ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ 13ನೇ ವರ್ಷದ ಕ್ರೀಡಾಕೂಟ

0
10

ನೇತ್ರಾವತಿ ಬಳಗ ಮಂಜಲ್ಪಾದೆಸಜೀಪಮುನೂರುಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ 13ನೇ ವರ್ಷದ ಕ್ರೀಡಾಕೂಟವನ್ನು ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀಮದ್ ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಶ್ರೀ ಕೃಷ್ಣ ತತ್ವವನ್ನು ಸಾರಿದ್ದು ಅದರಂತೆ ನಾವು ನಡೆದು ಕೃಷ್ಣ ಅನುಗ್ರಹಕ್ಕೆ ಪಾತ್ರರಾಗೋಣ ಎಂಬುದಾಗಿ ಶುಭ ಹಾರೈಸಿದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜಿ ನರೇಂದ್ರ ಆಳ್ವ ,ಪ್ರಮೀಳ ಪಿ ಗಟ್ಟಿ, ನೇತ್ರಾವತಿ ಬಳಗ ಅಧ್ಯಕ್ಷ ಶ್ರೇಯಸ್ ಗಟ್ಟಿ,ಪ್ರಮುಖರಾದ ವಾಸು ಗಟ್ಟಿ ,ವಿಶ್ವನಾಥ ಪೂಜಾರಿ ,ಗೋಪಾಲಗಟ್ಟಿ ,ಪುರಂದರ ಕುಲಾಲ್, ಪುರುಷೋತ್ತಮಗಟ್ಟಿ ಮೊದಲಾದವರು ಉಪಸ್ಥಿತರಿದ್ದರು .

ಮೊಸರು ಕುಡಿಕೆ ಅಂಗವಾಗಿ ಬಾಲಕ ಬಾಲಕಿಯರಿಗೆ ಯುವಕ ಯುವತಿಯರಿಗೆ ವಿವಿಧ ಆಟದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.