ಹಗ್ಗವೇ ತಂದಿತು ಆಪತ್ತು : 11ರ ಬಾಲಕ ಸಾವು

0
36

ಕಾಸರಗೋಡು : ಅಂಗನವಾಡಿ ಮುಂಭಾಗದ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿಕೊಂಡ ಪರಿಣಾಮ 11 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಮಡಿಕೈ ಸಮೀಪದ ಕಾಞಿಪ್ಪೊಯಿಲ್‌ನಲ್ಲಿ ಸಂಭವಿಸಿದೆ.

ಮೃತ ಬಾಲಕನನ್ನು ರಾಜೇಶ್–ನೀತು ದಂಪತಿಯ ಪುತ್ರ, ಕಾಞಿಪ್ಪೊಯಿಲ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಅನೇಕ್ ಎಂದು ಗುರುತಿಸಲಾಗಿದೆ.

ಅಂಗನವಾಡಿಯ ಮುಂಭಾಗದಲ್ಲಿ ಅನೇಕ್ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂದರ್ಭ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಬಾಲಕನ ಕುತ್ತಿಗೆಗೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ.

ಘಟನೆ ಗಮನಕ್ಕೆ ಬಂದ ಕೂಡಲೇ ಆ ದಾರಿಯಾಗಿ ತೆರಳುತ್ತಿದ್ದ ಆಟೋ ರಿಕ್ಷಾ ಚಾಲಕರೊಬ್ಬರು ತಕ್ಷಣ ಬಾಲಕನನ್ನು ಹಗ್ಗದಿಂದ ಬಿಡಿಸಿ, ಕಾಞಂಗಾಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದನು ಎಂದು ತಿಳಿದುಬಂದಿದೆ.