ಸಚ್ಚೇರಿಪೇಟೆಯಲ್ಲಿ 7ನೇ ವರ್ಷದ ಸಾರ್ವಜನಿಕ ಮುದ್ದು ಕೃಷ್ಣ ಸ್ಪರ್ಧೆ

0
19

ಸಚ್ಚೇರಿಪೇಟೆ : ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಚ್ಚೇರಿಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 7ನೇ ವರ್ಷದ “ಸಾರ್ವಜನಿಕ ಮುದ್ದು ಕೃಷ್ಣ ಸ್ಪರ್ಧೆ” ಆಯೋಜಿಸಲಾಗಿದೆ.

ಸೆಪ್ಟೆಂಬರ್ 5ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಸಚ್ಚೇರಿಪೇಟೆಯ ಲಯನ್ಸ್ ಶಾಲಾ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯನ್ನು ಒಟ್ಟು ಆರು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ವಿವಿಧ ವಯೋಮಾನದ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧಾ ವಿಭಾಗಗಳು:

ಕಂದ ಕೃಷ್ಣ – 1 ವರ್ಷದೊಳಗಿನ ಮಕ್ಕಳಿಗೆ

ಪುಟಾಣಿ ಕೃಷ್ಣ – 1ರಿಂದ 2 ವರ್ಷದ ಮಕ್ಕಳಿಗೆ

ಮುದ್ದು ಕೃಷ್ಣ – 2ರಿಂದ 4 ವರ್ಷದ ಮಕ್ಕಳಿಗೆ

ಚಿನ್ನ ಕೃಷ್ಣ – 4ರಿಂದ 6 ವರ್ಷದ ಮಕ್ಕಳಿಗೆ

ಬಾಲ ಕೃಷ್ಣ – 6ರಿಂದ 8 ವರ್ಷದ ಮಕ್ಕಳಿಗೆ

ಯಶೋಧೆ ಕೃಷ್ಣ – 1ರಿಂದ 8 ವರ್ಷದೊಳಗಿನ ಮಕ್ಕಳು ತಮ್ಮ ತಾಯಿಯೊಂದಿಗೆ ಭಾಗವಹಿಸುವ ವಿಭಾಗ.

    ಸ್ಪರ್ಧಾಳುಗಳ ಜನನ ಪ್ರಮಾಣಪತ್ರದ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ 8073641908, 9591319024, 8197490549 ಸಂಪರ್ಕಿಸಬಹುದು.