
ಶ್ರೀ ಕೆ. ಮನೋಹರ ಶೆಟ್ಟಿ ಮಂದಾರ ಇವರ ನೇತೃತ್ವದಲ್ಲಿ ಹಾಗೂ ಶಿರ್ವದ ನಾಗರಿಕರ ಸಹಕಾರದೊಂದಿಗೆ ನೂತನವಾಗಿ ಖರೀದಿಸಲಾದ ಆಂಬ್ಯುಲೆನ್ಸ್ ವಾಹನವನ್ನು ಶಿರ್ವ ಹಾಗೂ ಆಸುಪಾಸಿನ ಸಾರ್ವಜನಿಕರ ಉಚಿತ ಉಪಯೋಗಕ್ಕಾಗಿ ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಇಂದು ದಿನಾಂಕ 05-09-2026 ರಂದು ಕೊಲ್ಲಬೆಟ್ಟು ಸಂಘಮಿತ್ರ ರವೀಂದ್ರ ಶೆಟ್ಟಿ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಟಿ. ಶಂಭು ಶೆಟ್ಟಿ, ಶ್ರೀಮತಿ ಹೇಮಲತಾ ಶಂಭು ಶೆಟ್ಟಿ ಶಿರ್ವ, ಕೆ. ಮನೋಹರ ಶೆಟ್ಟಿ ಮಂದಾರ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಎನ್.ಸಿ. ಶೆಟ್ಟಿ ಮುಂಬಯಿ, ಶಿರ್ವ ಬಂಟರ ಸಂಘದ ಅಧ್ಯಕ್ಷರಾದ ಸಾಯಿನಾಥ ಶೆಟ್ಟಿ ಕುತ್ಯಾರು, ಶಿರ್ವ ಮಹಿಳಾ ಮಂಡಲ(ರಿ.) ಅಧ್ಯಕ್ಷರಾದ ಸ್ಪೂರ್ತಿ ಶೆಟ್ಟಿ, ಶಿರ್ವ ಸಿ. ಎ. ಬ್ಯಾಂಕ್ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಹಾಗೂ ಗುಲಾಬಿ ಶೆಟ್ಟಿ ಕೇಂಜ ನಡಿಗುತ್ತು, ಸಮಾಜ ಸೇವಕರಾದ ರಾಮರಾಯ ಪಾಟ್ಕರ್ ಉಪಸ್ಥಿತರಿದ್ದರು.

