ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಾಲಯದ ಸಮೀಪದಲ್ಲಿರುವ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಧಾರ್ಮಿಕ ಹಾಗೂ ಪ್ರಕೃತಿ ವೈಶಿಷ್ಟ್ಯದಿಂದ ಪ್ರಸಿದ್ಧಿ ಪಡೆದಿದೆ.
ಚಿಲುಮೆಯಿಂದ ಹೊರಹೊಮ್ಮುವ ಬಿಸಿ ನೀರಿನಲ್ಲಿ ಖನಿಜಾಂಶಗಳಿದ್ದು, ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಶ್ರೀ ವಿಷ್ಣುಮೂರ್ತಿ ದೇವರ ಸಾನಿಧ್ಯದಿಂದಾಗಿ ಇದು ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ನವವಿವಾಹಿತರು ಸೇರಿದಂತೆ ಹಲವು ಭಕ್ತರು ಇಲ್ಲಿಗೆ ಭೇಟಿ ನೀಡಿ ತೀರ್ಥಸ್ನಾನ ಮಾಡುವ ಸಂಪ್ರದಾಯವಿದೆ.
ಪ್ರತಿ ವರ್ಷದ ತೀರ್ಥ ಅಮಾವಾಸ್ಯೆಯಂದು ನಡೆಯುವ ವಿಶೇಷ ಪುಣ್ಯ ತೀರ್ಥಸ್ನಾನವು ಈ ಬಾರಿ ಸೆಪ್ಟೆಂಬರ್ 11ರಂದು, ಶುಕ್ರವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

