ಕಾಪು ದಂಡತೀರ್ಥ ಬಳಿ ಸರಣಿ ಅಪಘಾತ: ಇಬ್ಬರು ಬೈಕ್ ಸವಾರರಿಗೆ ಗಾಯ

0
4

ಕಾಪು: ದಂಡತೀರ್ಥ ಹೈವೇ ಬಳಿ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ.

KA-20-K-5345 ನಂಬರಿನ ಸ್ಪ್ಲೆಂಡರ್ ಬೈಕ್, KA-04-HJ-7032 ನಂಬರಿನ FZ ಬೈಕ್ ಹಾಗೂ KA-19-MN-2181 ನಂಬರಿನ ಟಾಟಾ ಕಾರು ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎರಡೂ ಬೈಕ್‌ಗಳ ಚಾಲಕರು ಗಾಯಗೊಂಡಿದ್ದು, ಅವರನ್ನು ಅಂಬುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ.

ಅಪಘಾತದ ಬಳಿಕ ಮೂರು ವಾಹನಗಳನ್ನು ಹೈವೇ ಬದಿಗೆ ಸ್ಥಳಾಂತರಿಸಿ, ಕಾಪು ಪೊಲೀಸ್ ಠಾಣೆಯ SHO ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

ಅಪಘಾತದ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.