ನವಿ ಮುಂಬೈಯ ಶ್ರೀ ಪುತ್ತಿಗೆ ಮಠಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

0
3

ನವಿ ಮುಂಬಯಿ : ಶ್ರೀ ಪುತ್ತಿಗೆ ಮಠ ಶ್ರೀಪಾದರ ಆತ್ಮೀಯರೂ, ಪ್ರಿಯ ಶಿಷ್ಯರೂ ಹಾಗೂ ಉಡುಪಿಯ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಸೆ 6 ರಂದು ಶ್ರೀ ಪುತ್ತಿಗೆ ಮಠ, ನವಿ ಮುಂಬೈ ಶಾಖೆಗೆ ಭೇಟಿ ನೀಡಿ, ಪೂಜ್ಯ ಶ್ರೀಪಾದರಿಂದ ಆಶೀರ್ವಾದ ಪಡೆದು, ಫಲ-ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಪುತ್ತಿಗೆ ಮಠದ ರತೀಶ್ ತಂತ್ರಿ. ಚಾತುರ್ಮಾಸ್ಯ ಸೇವಾ ಸಮಿತಿಯ ಪರವಾಗಿ ಸಂಚಾಲಕರಾದ ಸುಧೀರ್ ಆರ್. ಎಲ್. ಶೆಟ್ಟಿಯವರು ಹಾಗೂ ಭೂಷಣ ಶೆಟ್ಟಿಯವರು ಗುರ್ಮೆ ಸುರೇಶ್ ಶೆಟ್ಟಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು..