ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಹೆಬ್ರಿ ಪೇಟೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಕರ್ಷಕ ಶೋಭಾ ಯಾತ್ರೆ ಸಾಗಿ ಬಂದು ಅಮೃತ ಭಾರತಿ ಮೈದಾನದಲ್ಲಿ ವಿವಿಧ ಪ್ರದರ್ಶನಗಳೊಂದಿಗೆ ಸಂಪನ್ನಗೊಂಡಿತು.
ಶ್ರೀ ಅನಂತ ಪದ್ಮನಾಭ ಸನ್ನಿಧಾನ ಕೆಳಪೇಟೆ ಹೆಬ್ರಿ , ಶ್ರೀ ಗಜಾನನ ಗೇರುಬೀಜ ಕಾರ್ಖಾನೆ ಕುಚ್ಚುರು ರಸ್ತೆ, ಹಾಗೂ ಬಂಟರ ಭವನ ಆಗುಂಬೆ ರಸ್ತೆ ಈ ಮೂರು ಕಡೆಗಳಿಂದ ಆರಂಭಗೊಂಡ ಶೋಭಾ ಯಾತ್ರೆ ಹೆಬ್ರಿ ಮುಖ್ಯ ಸರ್ಕಲ್ ನಲ್ಲಿ ಒಂದುಗೂಡಿ, ಘೋಷ ವಾದನದೊಂದಿಗೆ ಯಕ್ಷಗಾನ ವೇಷ, ಕುಣಿತ ಭಜನೆ, ಕೋಲಾಟ , ಹುಲಿ ಕುಣಿತದ ಪ್ರದರ್ಶನದೊಂದಿಗೆ , ಬಾಲಕೃಷ್ಣ ರಾಧೆ ವೇಷಧರಿಸಿದ ಮಕ್ಕಳು ಮೆರವಣಿಗೆಯಲ್ಲಿ ಸಾಗಿ ಬಂದರು.

ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಮೊಸರು ಕುಡಿಕೆ ಒಡೆಯುವ ಸಾಂಪ್ರದಾಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮೊಸರು ಕುಡಿಕೆ ಒಡೆದು ಸಂಭ್ರಮಿಸಿದರು. ಹೆಬ್ರಿಯ ಮುಖ್ಯ ರಸ್ತೆಯಲ್ಲಿ ಸಾಗಿ ಬಂದ ಶೋಭಾ ಯಾತ್ರೆ ಮೆರವಣಿಗೆ ಅಮೃತ ಭಾರತಿ ಕ್ರೀಡಾಂಗಣವನ್ನು ತಲುಪಿ ಮೊಸರು ಕುಡಿಕೆ ಹೊಡೆದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿವಿಧ ಪ್ರದರ್ಶನಗಳೊಂದಿಗೆ ಸಂಪನ್ನಗೊಂಡಿತ್ತು .

ಈ ಸಂದರ್ಭದಲ್ಲಿ ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರಾದ ಸಿಎ. ಎಂ. ರವಿರಾವ್, ಕಾರ್ಯದರ್ಶಿ ಗುರುದಾಸ್ ಶೆಣೈ , ಸ್ಥಾಪಕ ಅಧ್ಯಕ್ಷರಾದ ಸತೀಶ್ ಪೈ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ರಾಜೇಶ್ ನಾಯಕ್, ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಶೈಲೇಶ್ ಕಿಣಿ, ಟ್ರಸ್ಟಿಗಳಾದ ಸುಧೀರ್ ನಾಯಕ್, ಯೋಗೀಶ್ ಭಟ್, ಭಾಸ್ಕರ್ ಜೋಯಿಸ್, ಲಕ್ಷ್ಮಣ ಭಟ್, ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್ ಜೋಗಿ, ಅರುಣ್ ಎಚ್. ವೈ. ಅಪರ್ಣ ಆಚಾರ್, ಶಕುಂತಲಾ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ವೃಂದದವರು , ಪೋಷಕರು , ವಿದ್ಯಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

