ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ : ನಳೀನ್ ಕುಮಾರ್ ಕಟೀಲ್ ಭಾಗಿ

0
17

ಮಂಜೇಶ್ವರ : ಗೆಳೆಯರ ಬಳಗ (ರಿ) ಬಲ್ಲಂಗುಡೇಲು ಇದರ ವತಿಯಿಂದ ಸಾರ್ವಜನಿಕ ಮೊಸರುಕುಡಿಕೆ ಉತ್ಸವವು ಸೆಪ್ಟೆಂಬರ್ ಆರರಂದು ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಮೊಸರು ಕುಡಿಕೆ ಉತ್ಸವದ ಆಟೋಟ ಸ್ಪರ್ಧೆಗಳಲ್ಲಿ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು.ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಭಗವತಿ ಮಾತೆಗೆ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಆಟೋಟ ಸ್ಪರ್ಧೆಗಳ ಉದ್ಘಾಟನೆಯನ್ನು ಪಟ್ಟತ್ತಮೊಗರು ಮನೆತನದ ಹಿರಿಯವರಲ್ಲಿ ಕಿರಿಯರಾದ ಕಿರಣ್ ಕುಮಾರ್ ಆಳ್ವ ಪಟ್ಟತ್ತಮೋಗರು ಉದ್ಘಾಟಿಸಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಹಿರಿಯ ಅನುವಂಶಿಕ ಅರ್ಚಕರಾದ ಶ್ರೀ ವಿಶ್ವನಾಥ ಬೆಳ್ಚಪಾಡರವರನ್ನು ಸನ್ಮಾನ ಮಾಡುವ ಮೂಲಕ ಗೌರವಿಸಲಾಯಿತು.

ನಂತರ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.ಆಟೋಟ ಸ್ಪರ್ಧೆಯ ನಿರೂಪಣೆಯನ್ನು ಲೀಲಾಸ್ ಚಂದ್ರಹಾಸ ಅಜ್ಜಿಹಿತ್ತಿಲು ನೆರವೇರಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ಮಾಜಿ ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ರವರು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು.ವೇದಿಕೆಯಲ್ಲಿ ನಾರಾಯಣ ನಾಯ್ಕ್ ನಡುಹಿತ್ತಿಲು,ಜಯರಾಜ್ ಶೆಟ್ಟಿ ಚಾರ್ಲ,ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಮಜಿಬೈಲು,ಜಗದೀಶ್ ಮೂಡಂಬೈಲು,ರಮೇಶ್ ಸುವರ್ಣ ಮಜ್ಜೆಲ್,ಮೂಸಾ ಹಾಜಿ ಬೆಳಿಬಳಪು,ಸಂಘದ ಪದಾಧಿಕಾರಿಗಳಾದ ಬಶೀರ್ ಮೂಡಂಬೈಲು,ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು,ಮಾದವ ಉಳಿಯ ಮತ್ತು ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ರವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಬಳಗದ ಅಧ್ಯಕ್ಷರಾದ ಕಾರ್ತಿಕ್ ಶೆಟ್ಟಿಯವರು ಸ್ವಾಗತಿಸಿದರು,ಕಾರ್ಯದರ್ಶಿ ಪ್ರದೀಪ್ ಶೆಟ್ಟಿಯವರು ಧನ್ಯವಾದವಿತ್ತರು.ಮಧ್ಯಾಹ್ನ ಎಲ್ಲಾರಿಗೂ ಭೋಜನದ ವ್ಯವಸ್ಥೆ ಮಾಡಲಾಯಿತು.