ಕಳತ್ತೂರು ಸಾಮೂಹಿಕ ಶನೀಶ್ವರ ಪೂಜೆ

0
14

ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ವರ್ಷಂಪ್ರತಿ ನಡೆಯುವ ಶ್ರೀ ಸಾಮೂಹಿಕ ಶನೀಶ್ವರ ಪೂಜೆ ಕ್ಷೇತ್ರದ ಅರ್ಚಕರಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಹಾಗೂ ಅನ್ನಸಂತರ್ಪಣೆಯೂ ನಡೆಯಿತು.

ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಂಗನಾಥ ಭಟ್ ಕುತ್ಯಾರು, ಅರ್ಚಕರಾದ ಕೇಶವ ತಂತ್ರಿ, ಕಳತ್ತೂರು ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ ತಂತ್ರಿ, ದಿವಾಕರ ಬಿ. ಶೆಟ್ಟಿ ಮಲ್ಲಾರು, ಜಯಕೃಷ್ಣ ಆಳ್ವ ಪಾದೂರು ಗುತ್ತು, ರಾಜೇಶ್ ಮೂಲ್ಯ, ಗಣೇಶ್ ನಾಯ್ಕ್ ಕಳತ್ತೂರು, ದಿವಾಕರ ಡಿ. ಶೆಟ್ಟಿ ಕಳತ್ತೂರು, ಮಮತಾ ಕಿರಣ್ ಪಾದೂರು, ಮಮತಾ ಆಚಾರ್ಯ ಕುತ್ಯಾರು, ದೇವಳದ ಪ್ರಬಂಧಕ ಕೃಷ್ಣಮೂರ್ತಿ ಭಟ್, ಮಾಜಿ ಆಡಳಿತ ಮಂಡಳಿ ಸದಸ್ಯರುಗಳು, ಕುತ್ಯಾರು, ಪಾದೂರು, ಕಳತ್ತೂರು ಗ್ರಾಮಸ್ಥರು ಹಾಗೂ ಪರ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.