ರಾಮ ಕ್ಷತ್ರಿಯ ಭಜನಾ ಸಂಘದ ದಶಮ ಸಂಭ್ರಮ

0
8

ಮಹಿಳಾ ಭಜನಾ ಸಂಘಗಳು ಸ್ತ್ರೀಶಕ್ತೀಕರಣಕ್ಕೆ ದಾರಿದೀಪ: ಡಾ. ವಾಮನ್ ರಾವ್ ಬೇಕಲ್

ಮುಲ್ಕಿ–ಸುರತ್ಕಲ್: ರಾಮ ಕ್ಷತ್ರಿಯ ಭಜನಾ ಸಂಘ, ಮುಲ್ಕಿ–ಸುರತ್ಕಲ್ ವತಿಯಿಂದ ಸಂಘದ ದಶಮ ಸಂಭ್ರಮದ ಅಂಗವಾಗಿ ವರಮಹಾಲಕ್ಷ್ಮೀ ಪೂಜೆ, ಭಜನಾ ಸಂಕೀರ್ತನೆ, ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ. 6ರಂದು ನಡೆಯಿತು.

ಬೆಳಗ್ಗೆ ನಡೆದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಸಂಘದ ಮಹಿಳಾ ಸದಸ್ಯರು ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಹಾಗೂ ಭಜನಾ ಸಂಕೀರ್ತನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳಾರತಿಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾ ಉಮೇಶ್ ವಹಿಸಿದ್ದರು.

ಜಯಲಕ್ಷ್ಮೀ, ವಾರಿಜಾಕ್ಷಿ, ವಾಣಿ ಕಿರಣ್ ಹಾಗೂ ಶಾಲಿನಿ ಪ್ರದೀಪ್ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಅತಿಥಿಗಳಾದ ಸಂಧ್ಯಾ ರಾಣಿ ಕಾಸರಗೋಡು ಹಾಗೂ ಮಂಜುಳಾ ಜಯಕರ ಸೇರಿದಂತೆ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಮೋದ್ ಕುಮಾರ್ ಪಿ., ಕಿಶೋರ್ ಕುಮಾರ್, ವಾಣಿ ಕಿರಣ್, ಚೇತನ್ ಬೇಕಲ್ ಹಾಗೂ ಭಜನಾ ಸಂಘದ ಸ್ಥಾಪಕಾಧ್ಯಕ್ಷೆ ರೇಖಾ ಸುದೇಶ್ ರಾವ್ ಉಪಸ್ಥಿತರಿದ್ದರು.

ಬಳಿಕ ಡಾ. ವಾಮನ್ ರಾವ್ ಬೇಕಲ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಭಜನಾ ತಂಡಗಳ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳಾ ಭಜನಾ ಸಂಘಗಳು ಸಮಾಜದಲ್ಲಿ ಮಹಿಳೆಯರ ಸಬಲೀಕರಣಕ್ಕೆ ದಾರಿದೀಪವಾಗಿವೆ. ಭಜನಾ ಚಟುವಟಿಕೆಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಸಂಘಟನಾ ಮನೋಭಾವವನ್ನು ಬೆಳೆಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿವಿಧ ತಂಡಗಳ ಕುಣಿತ ಭಜನೆ ಪ್ರೇಕ್ಷಕರ ಗಮನ ಸೆಳೆಯಿತು.

ರಾಮ ಕ್ಷತ್ರಿಯ ಸಮಾಜದ ಶಿಕ್ಷಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮನೆ ಮನೆ ಭಜನೆಗೆ ಅವಕಾಶ ಕಲ್ಪಿಸಿದ ಸದಸ್ಯರನ್ನೂ ಸನ್ಮಾನಿಸಲಾಯಿತು. ಯುವ ವೃಂದದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಕೃಷ್ಣ ಜೆ. ಪಾಲೆಮಾರ್, ಶ್ರೀನಿವಾಸ ಹೆಬ್ರಿ, ಡಾ. ದೇವಪ್ಪ ಕೆ.ವಿ., ಡಾ. ರವೀಂದ್ರ ಜೆಪ್ಪು, ಡಾ. ಬಾಲಕೃಷ್ಣ ಮದ್ದೋಡಿ ಹಾಗೂ ಬಿ.ಎಂ. ನಾಥ್ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ನಾಗರಾಜ ಮದ್ದೋಡಿ, ಸತ್ಯನಾರಾಯಣ ಹೂಡೆ, ಚಂದ್ರಶೇಖರ್ ಕೆ., ಚಂದ್ರಕಾಂತ, ರಾಘವ, ಜಯಲಕ್ಷ್ಮೀ ದಿನೇಶ್, ಸುರೇಶ್ ರಾವ್ ಕಾರ್ನಾಡ್, ಸುದೇಶ್ ಕುಮಾರ್ ರಾವ್, ವೈಶಾಕ್ ಹಾಗೂ ಶ್ರೀಶ ಎಸ್. ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಮ ಕ್ಷತ್ರಿಯ ಸಂಕೀರ್ತನೆ ತಂಡ ಜೆಪ್ಪು–ಮಾರ್ಗನ್ ಗೇಟ್, ಶ್ರೀ ವಿಷ್ಣುಪ್ರಿಯ ಮಹಿಳಾ ಭಜನಾ ಸಂಘ ಕೀಕಾನ, ರಾಮ ಕ್ಷತ್ರಿಯ ಭಜನಾ ಸಂಘ ನಗರ ಘಟಕ ಉಡುಪಿ, ರಾಮ ಕ್ಷತ್ರಿಯ ಮಹಿಳಾ ಭಜನಾ ಮಂಡಳಿ ಉಡುಪಿ–ಉಪ್ಪೂರು, ರಾಮ ಕ್ಷತ್ರಿಯ ಭಜನಾ ಸಂಘ ಕೂಡ್ಲು, ಶ್ರೀ ಲಕ್ಷಣಾನಂದ ಸರಸ್ವತಿ ಮಹಿಳಾ ಭಜನಾ ವೃಂದ ಅಣಂಗೂರು–ಕಾಸರಗೋಡು, ರಾಮ ಕ್ಷತ್ರಿಯ ಭಜನಾ ಸಮಿತಿ ಮೂಡಬಿದ್ರೆ, ಸದ್ಗುರು ರಾಮ ರಾಜ ಕ್ಷತ್ರಿಯ ಭಜನಾ ಸಂಘ ಉಳ್ಳಾಲ ತಾಲೂಕು ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಸುಬ್ರಹ್ಮಣ್ಯ ಮಹಿಳಾ ಭಜನಾ ಸಂಘ ಕೊರಕೋಡು–ಕಾಸರಗೋಡು ಸೇರಿದಂತೆ ವಿವಿಧ ಭಜನಾ ಮಂಡಳಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭಜನಾ ಸೇವೆ ಸಲ್ಲಿಸಿದವು. ಬಳಿಕ ಎಲ್ಲ ತಂಡಗಳನ್ನು ಗೌರವಿಸಲಾಯಿತು.

ನಾಗವೇಣಿ, ಚಂದ್ರಿಕಾ ಅರವಿಂದ, ಸವಿತಾ ಶಿವಾನಂದ, ಭವ್ಯ ರಾಘವೇಂದ್ರ, ಸೂರ್ಯ, ರೇಷ್ಮಾ ಬೇಕಲ್, ಜಯಶ್ರೀ ಪುನರೂರು, ಉಮೇಶ್ ಜೆಪ್ಪು, ಉಮಾವತಿ, ರಂಜಿನಿ ಲೋಕನಾಥ್, ಕಿಶೋರ್ ಮುಂಚೂರು, ಪ್ರದೀಪ್ ಕುಳಾಯಿ, ನಮಿತಾ ಪುನರೂರು, ವಿಷ್ಣುಮೂರ್ತಿ ಮುಲ್ಕಿ, ಅರುಣಲತಾ ತಾರಾನಾಥ್, ಪ್ರಮೋಧಿನಿ, ರವಿರಾಜ್ ಸಾಗರ್, ಮಂಜುಳ ಪ್ರಕಾಶ್ ಹಾಗೂ ರಾಜೇಶ್ ಕೋಟೆಕಣಿ ಮತ್ತಿತರರು ಉಪಸ್ಥಿತರಿದ್ದರು.