ಗಣಿತ ಮಾದರಿಯಲ್ಲಿ ರಾಜ್ಯಮಟ್ಟದಲ್ಲಿ ಮನಸ್ವಿ ಉಡುಪ ಪ್ರಥಮ

0
6

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ( ಪ್ರಾಂತೀಯ) ರಾಜ್ಯಮಟ್ಟದ ಗಣಿತ, ವಿಜ್ಞಾನ ಮತ್ತು ಸಂಸ್ಕೃತಿ ಜ್ಞಾನ ಮೇಳವು ಬಳ್ಳಾರಿಯ ಬಾಲ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿದ್ದು, ಬಾಲವರ್ಗದಲ್ಲಿ  ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ಮನಸ್ವಿ ಉಡುಪ,( ಗಣಿತ ನವಚಾರಿತ ಮಾದರಿ ಪ್ರದರ್ಶನದಲ್ಲಿ ) ಪ್ರಥಮ ಸ್ಥಾನವನ್ನು ಪಡೆದು ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಿಶೋರ ವರ್ಗದಲ್ಲಿ 10ನೇ ತರಗತಿಯ ವರ್ಷಿತ್,(ಗಣಿತ ಪ್ರಯೋಗದಲ್ಲಿ ) ದ್ವಿತೀಯ ಸ್ಥಾನವನ್ನು, 9ನೇ ತರಗತಿಯ ಐಸಿರಿ ಎಂ ( ವಿಜ್ಞಾನ ಪರಮಾಣು ರಚನೆ ಮಾದರಿ ಪ್ರದರ್ಶನದಲ್ಲಿ ) ತೃತೀಯ ಸ್ಥಾನವನ್ನು,  9ನೇ ತರಗತಿಯ ಸ್ಮಿತಿ, ( ಮಾನವನ ಹೃದಯದ ಕಾರ್ಯ ವಿಧಾನದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ) ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ಸಹೋದ್ಯೋಗಿಗಳನ್ನು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಅಭಿನಂದಿಸಿದ್ದಾರೆ.