ರೋಟರಿ ಕ್ಲಬ್ ದಾಂಡೇಲಿ ವತಿಯಿಂದ ಕಕ್ಕುಂಜೆ ಶಾಲಾ ಮಕ್ಕಳಿಗೆ ಸೈಕಲ್ ಮತ್ತು ಛತ್ರಿ ವಿತರಣಾ ಕಾರ್ಯಕ್ರಮ

0
3

ರೋಟರಿ ಕ್ಲಬ್ ದಾಂಡೇಲಿ ಇದರ ಅಧ್ಯಕ್ಷರಾದ ಮಿಥುನ್ ನಾಯಕ್, ಕಾರ್ಯದರ್ಶಿಗಳಾದ ಡಾ. ಧ್ಯಾನ್ ದೀಪ್, ಖಜಾಂಚಿ ಅಭಿಷೇಕ್ ಕನ್ಯಾಡಿ, ರೋಟೆರಿನ್ ರಾದ ಎಸ್. ಜಿ. ಬಿರಾದಾರ್, ರಾಜೀಶ್ ತಿವಾರಿ, ರವಿ ನಾಯಕ್, ಮೊಹಮ್ಮದ್ ಮಾಲ್ದಾರ್, ಕೈಲಾಶ್, ಕೋಟೆ ಕೆರೆ ಪಂಚಲಿಂಗೇಶ್ವರ ದೇವಸ್ಥಾನ ಬಾರ್ಕೂರು ಇದರ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಶೆಟ್ಟಿ ಹುಬ್ಬಳ್ಳಿ, ಊರ ಹಿರಿಯ ನಾಗರಿಕರಾದ ವಿಜಯಕುಮಾರ ಅಡಿಗರ ಉಪಸ್ಮಿತಿಯಲ್ಲಿ , ರೋಟರಿ ಕ್ಲಬ್ ನ ಕಮ್ಯೂನಿಟಿ ಸರ್ವೀಸ್ ಡೈರೆಕ್ಟ್ ರಾದ ಪ್ರಕಾಶ ಎಸ್ ಶೆಟ್ಟಿ ಗೈನಾಡಿಯವರು ಶಾಲಾ ಮಕ್ಕಳಿಗೆ ಛತ್ರಿ ಹಾಗೂ ಆರ್ಥಿಕವಾಗಿ ಹಿಂದುಳಿದ, ದೂರದ ಮಕ್ಕಳಿಗೆ ಸೈಕಲ್ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಶಾಲಾ ಎಸ್ ಸಿ ಎಂಸಿ ಅಧ್ಯಕ್ಷರಾದ ನಾಗರಾಜ ಕುಲಾಲ ಇವರು ಮಾತನಾಡಿ ಛತ್ರಿ ಹಾಗೂ ಸೈಕಲ್ ಕೊಡುಗೆ ನೀಡಿದ ದಾಂಡೇಲಿ ರೋಟರಿ ಕ್ಲಬ್ ನವರಿಗೆ ಅಭಿನಂದನೆ ಸಲ್ಲಿಸಿದರು.

ಶಾಲಾ ಮುಖ್ಯಶಿಕ್ಷಕರಾದ ರಾಘವೇಂದ್ರ ಇವರು ಅತಿಥಿಗಳಿಗೆ ಸ್ವಾಗತ ಕೋರಿ, ಶಾಲಾ ಅಗತ್ಯ ಬೇಡಿಕೆ ಯಾದ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಗಾಗಿ ಮನವಿ ನೀಡಿದಾಗ , ನವೆಂಬರ ತಿಂಗಳೊಳಗೆ ನಿಮ್ಮ ಬೇಡಿಕೆಯನ್ನು ಈಡೇರಿಸಲಾಗುವುದೆಂದು ಸುಗ್ಗಿ ಸುಧಾಕರ ಶೆಟ್ಟಿಯವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ ಸಿ ಎಂಸಿ ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕ ಮಧುಮತಿ ಕಾರ್ಯಕ್ರಮವನ್ನು ನಿರೂಪಿಸಿದರೆ ಪುಷ್ಪಾವತಿ ಧನ್ಯವಾದಗೈದರು. ಲತಾಕುಮಾರಿ, ವೇದಾವತಿ, ಚೈತ್ರಾ ಹಾಗೂ ಪೂರ್ಣಿಮಾ ಕಾರ್ಯಕ್ರಮವನ್ನು ಸಂಯೋಜಿಸಿದರು.