ನಡೂರು : ನಡೂರು ಕಲ್ಲರಾಶಿಯಿಂದ ಪಟೇಲ್ ಅಂತಯ್ಯ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗಿನ ರಸ್ತೆಯಲ್ಲಿದ್ದ ಹೊಂಡಗಳಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ತೀರ ಅಸ್ತವ್ಯಸ್ತಗೊಂಡ ರಸ್ತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರು ಮತ್ತು ನಡೂರು ರಿಕ್ಷಾ ಚಾಲಕರು ಮತ್ತು ಮಾಲಕರು ಸೇರಿ ಕಾಂಕ್ರೀಟ್ ಹಾಕಿ ಮುಚ್ಚಿ ದುರಸ್ತಿ ಮಾಡಿದ್ದಾರೆ .
ಸಾರ್ವಜನಿಕರ ಅನುಕೂಲಕ್ಕಾಗಿ ಹೊಂಡಗಳನ್ನು ಕಾಂಕ್ರೀಟ್ ಮೂಲಕ ಮುಚ್ಚಿ ರಸ್ತೆ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಇದೇ ಮಾರ್ಗದಲ್ಲಿ ವಿವಿಧ ಶಾಲಾ ಕಾಲೇಜ್ ಬಸ್ ಗಳು, ಪ್ಯಾಕ್ಟರಿ ಘನ ವಾಹನಗಳು ಸಂಚರಿಸುತ್ತಿದ್ದು ಈ ಕಾರ್ಯದಿಂದ ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಸೇರಿದಂತೆ ಸ್ಥಳೀಯ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ರಿಕ್ಷಾ ಚಾಲಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

