ಸೆ. 14ರಂದು ಗೌಡ ಸಾರಸ್ವತ ಸಮಾಜದಿಂದ 51ನೇ ವರ್ಷದ ಶ್ರೀ ಗಣೇಶೋತ್ಸವ

0
18

ದಾವಣಗೆರೆ : ಗೌಡ ಸಾರಸ್ವತ ಸಮಾಜದ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 14 ರಿಂದ 18 ರವರೆಗೆ 51ನೇ ವರ್ಷದ ಶ್ರೀ ಗಣೇಶೋತ್ಸವವನ್ನು ದಾವಣಗೆರೆಯ ಎಂ.ಸಿ.ಸಿ. `ಎ’ ಬ್ಲಾಕ್‌ನ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ವಿಜೃಂಭಣೆಯಿAದ ಆಚರಿಸಲಾಗುವುದು ಎಂದು ಸಮಾಜದ ನಿಕಟ ಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಿಳಿಸಿದ್ದಾರೆ.

5 ದಿನಗಳ ಕಾಲ ಪ್ರತಿದಿನ ಪುರುಷರಿಗೆ ಕ್ರಿಕೆಟ್ ಪಂದ್ಯಾವಳಿ, ಸಾಮೂಹಿಕ ಭಜನೆ, ಸಮಾಜದ ಯುವಕ ವೃಂದದಿAದ ವಿವಿಧ ಮನೋರಂಜನೆ ಕಾರ್ಯಕ್ರಮ, ಸಮಾಜದ ಮಹಿಳಾ ಮಂಡಳಿಯಿAದ ವಿವಿಧ ಸಾಂಸ್ಕೃತಿಕ ಸಮಾರಂಭ, ಸಮಾಜದ ಬಂಧು-ಬಾಂಧವರಿಗೆ ಛದ್ಮವೇಷ ಸ್ಪರ್ಧೆ, ಕೊನೆ ದಿನ ಸಂಜೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಂತರ ಶ್ರೀ ವಿಘ್ನೇಶ್ವರ ವಿಗ್ರಹ ವಿಸರ್ಜನೆ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷರಾದ ಅಮಿತಾ ಡಾ. ವೇಣುಗೋಪಾಲ್ ಪೈಯವರು ಪ್ರಕಟಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಮಾಜದ ಕಾರ್ಯದರ್ಶಿ ಕೆ.ವೆಂಕಟರಮಣ ಭಟ್ , ಖಜಾಂಚಿ ಆರ್.ವಿ.ಶೆಣೈ ಈ ಕೆಳಗಿನ ಸನೀಹವಾಣಿಗಳಿಗೆ ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ. 9448666649, 9986154676, 9008490180, 8722605747