ಕವಿ ಸು ಶಿ ಶಾಂತಕುಮಾರ್ ಹರವೆ ರವರಿಗೆ “ಬರಹ ಮಾಣಿಕ್ಯ” ಪ್ರಶಸ್ತಿ

0
36

ಚಿತ್ರದುರ್ಗ : ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘ ರಿ, ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರ ವತಿಯಿಂದ ಸೆಪ್ಟೆಂಬರ್ 6, 2026 ರಂದು ಭಾನುವಾರ ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ತೃತೀಯ ಸಾಹಿತ್ಯ ಸಮ್ಮೇಳನವು ಬಹಳ ಅರ್ಥಪೂರ್ಣವಾಗಿ ಜರುಗಿತು . ಈ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆ , ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಕವಿ ಹಾಗೂ ಬರಹಗಾರರಾದ ಸು ಶಿ ಶಾಂತಕುಮಾರ್ ಹರವೆ ರವರಿಗೆ ರಾಜ್ಯಮಟ್ಟದ “ಬರಹ ಮಾಣಿಕ್ಯ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘವು ತಮ್ಮ ಬರಹವೇ ಶಕ್ತಿ ಎಂಬ ವೇದಿಕೆಯ ಮೂಲಕ ಆನ್ಲೈನ್ ನಲ್ಲಿ ನಡೆಸುತ್ತಿರುವ ಚುಟುಕು, ಹನಿಗವನ, ಕಾವ್ಯ ರಚನೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಇಂತಹ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸಿದ ಫಲವಾಗಿ ಈ ಪ್ರಶಸ್ತಿಯು ದೊರೆತಿದೆ ಎಂದರು.
ಇಂತಹ ಆನ್ಲೈನ್ ಸಾಹಿತ್ಯ ಕಾರ್ಯಕ್ರಮಗಳಿಂದ ಕನ್ನಡ ಸಾಹಿತ್ಯವು ಬೆಳೆಯುವುದಲ್ಲದೇ, ಅವಕಾಶಗಳಿಂದ ಸಾಹಿತ್ಯಪ್ರಿಯರು ತಮ್ಮ ಪ್ರತಿಭೆಯನ್ನು ಇಂತಹ ವೇದಿಕೆಗಳ ಮೂಲಕ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕವಿ ಸು ಶಿ ಶಾಂತ ಕುಮಾರ್ ರವರು ತಮ್ಮ ಅಭಿಪ್ರಾಯವನ್ನು ಪತ್ರಿಕೆಗೆ ತಿಳಿಸಿದ್ದಾರೆ.

ತಮಗೆ ಅವಕಾಶವನ್ನು ನೀಡಿದ ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ಚೌಹಾನ್ ರವರು ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.