ಬೆಳ್ಳಾರೆಯಿಂದ ತಮಿಳುನಾಡಿನ ಕಾಂಚಿಪುರಂ ದೇವಸ್ಥಾನಕ್ಕೆ ಮಲೆನಾಡು ಗಿಡ್ಡ ಪ್ರಯಾಣ

0
7

ಬೆಳ್ಳಾರೆ ಪಶು ಚಿಕಿತ್ಸಾಲಯದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ. ವಂದೇಗೋಮಾತರಂ ಅಡ್ಮಿನ್ ಬಳಗದ ಸಹಕಾರದಲ್ಲಿ ದೂರದ ತಮಿಳುನಾಡಿನ ಕಾಂಚಿಪುರಂ ದೇವಾಲಯದ ಆಡಳಿತ ಮಂಡಳಿ ವಂದೇಗೋಮಾತರಂ ಅಡ್ಮಿನ್ ಬಳಗವನ್ನು ಸಂಪರ್ಕಿಸಿ ಕಾಂಚಿಪುರಂ ದೇವಾಲಯಕ್ಕೆ ಹೆಣ್ಣು ಕರುಗಳಿರುವ ಎರಡು ಮಲೆನಾಡು ಗಿಡ್ಡ ಗೋಮಾತೆಯರನ್ನು ಕಳಿಸಿಕೊಡಲು ವಿನಂತಿಸಿದಾಗ ಬೆಳ್ಳಾರೆಯಿಂದ ದೂರದ ತಮಿಳುನಾಡಿನ ಕಾಂಚಿಪುರಂನ ಮೆಲ್ವೆನ್ ಪಕ್ಕಮ್ ಶ್ರೀಲಕ್ಷ್ಮೀ ನಾರಾಯಣ ಪೆರುಮಾಳ್ ದೇವಸ್ಥಾನಕ್ಕೆ 10 ದಿನದ ಕರು ಸೇರಿದಂತೆ ಮಲೆನಾಡು ಗಿಡ್ಡ ತಳಿಯ ಎರಡು ದನ ಹಾಗೂ ಕರು ವಿಶೇಷ ವಾಹನದಲ್ಲಿ ಪ್ರಯಾಣ ಬೆಳೆಸಿವೆ. ಅಳಿವಿನಂಚಿನಲ್ಲಿರುವ ಮಲೆನಾಡು ಗಿಡ್ಡ ಗೋವುಗಳನ್ನು ಸಂರಕ್ಷಿಸಿ ಸಂವರ್ಧನೆ ಮಾಡುತ್ತಿರುವ ಯುವ ಗೋಪಾಲಕ ಪ್ರವೀಣ್ ಬೆಳ್ಳಾರೆಯವರ ಗೋವುಗಳನ್ನು ತಮಿಳುನಾಡಿನ ದೇವಸ್ಥಾನಕ್ಕೆ ಬೀಳ್ಕೊಡುವ ಅಪರೂಪದ ಕಾರ್ಯಕ್ರಮ ಬೆಳ್ಳಾರೆಯ ಪಶು ಚಿಕಿತ್ಸಾಲಯದ ಬಳಿ ನಡೆಯಿತು.ದೇಶೀ ಗೋತಳಿ, ಅಳಿವಿನ ಅಂಚಿಗೆ ಬಂದಿದೆ ಅನ್ನುವ ಕೂಗು ಎಲ್ಲೆಡೆ ಕೇಳಿಸುತ್ತಿದೆ.ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆ ಕಾರ್ಯವೂ ನಿಧಾನವಾಗಿ ವೇಗ ಪಡೆಯುತ್ತಿದೆ.

ಗಿರ್ ,ಓಂಗೋಲ್ ಮೊದಲಾದ ತಳಿಗಳು ವಿದೇಶಗಳಲ್ಲೂ ವ್ಯಾಪಕವಾಗಿ ಸಾಕಲ್ಪಡುತ್ತಿವೆ. ಗುಜರಾತ್ನ ಗೀರ್, ರಾಜಸ್ಥಾನದ ಕಾಂಕ್ರೇಜ್ ದೇಶದಾದ್ಯಂತ ವ್ಯಾಪಿಸಿವೆ. ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶದ ಪುಂಗನೂರು ಗಿಡ್ಡ ತಳಿ, ಬಹಳಷ್ಟು ಬೇಡಿಕೆ ಹೊಂದಿದೆ. ಮಲೆನಾಡು ಗಿಡ್ಡ ತಳಿ ತನ್ನದೇ ಆದ ವಿಶೇಷತೆಗಳ ಕಾರಣಕ್ಕೆ ಕರ್ನಾಟಕ ರಾಜ್ಯದ ಎಲ್ಲೆಡೆ ಬೇಡಿಕೆಯನ್ನು ಹೊಂದಿದೆ.

ಈ ತಳಿಯನ್ನು ಸಂರಕ್ಷಿಸಿ, ಉತ್ತಮ ಗುಣಮಟ್ಟದ ಗೋವುಗಳನ್ನು ಅಭಿವೃದ್ಧಿಪಡಿಸಿ, ಸಾಧನೆ ಮಾಡಿರುವ, ಗೋಪಾಲ್ಸ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಗೋಪಾಲಕ, ಪ್ರವೀಣ ಬೆಳ್ಳಾರೆ ಕರಾವಳಿಯಿಂದ ಹೊರ ರಾಜ್ಯಕ್ಕೆ ಮಲೆನಾಡು ಗಿಡ್ಡ ಗೋವುಗಳನ್ನು ನೀಡುವ ಮೂಲಕ ವಿಶೇಷ ಸಾಧನೆ ಮಾಡುತ್ತಿದ್ದಾರೆ.

ಪ್ರವೀಣ್ ಬೆಳ್ಳಾರೆಯವರು ಅಕ್ಕರೆಯಿಂದ ಆರೈಕೆ ಮಾಡಿದ ಗೋವುಗಳು ಅಲ್ಲಿ ತಲುಪುವರೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿ ಬೆಳ್ಳಾರೆಯಿಂದ ಅಷ್ಟೇ ಪ್ರೀತಿಯಿಂದ ಅವುಗಳನ್ನು ಬೀಳ್ಕೊಡುವ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶಕುಂತಲಾ ನಾಗರಾಜ್, ಹಿರಿಯ ಸಹಕಾರಿ ಕಳಂಜ ವಿಶ್ವನಾಥ ರೈ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪೂರ್ವಾಧ್ಯಕ್ಷ ಪದ್ಮನಾಭ ಗೌಡ ಬೀಡು, ಬೆಳ್ಳಾರೆ ಪಶು ವೈದ್ಯಕೀಯ ಕೇಂದ್ರದ ಪಶು ವೈದ್ಯಾಧಿಕಾರಿ ಬಿ ಕೆ ಸೂರ್ಯನಾರಾಯಣ ಭಟ್ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ.ಬೆಳ್ಳಾರೆ ಪಶು ವೈದ್ಯಕೀಯ ಕೇಂದ್ರದ ಸಿಬ್ಬಂದಿಗಳಾದ ಪವಿತ್ರ ಎಂ, ಪ್ರತಿಮಾ ತಡಗಜೆ ಉಪಸ್ಥಿತರಿದ್ದರು.