
ಮೂಡುಬಿದಿರೆ : ಕಳೆದ 62 ವರ್ಷಗಳಿಂದ ಬಹಳ ಸಂಭ್ರಮದಲ್ಲಿ ಇಡೀ ಊರೇ ಒಂದಾಗಿ ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವ ಸೆಪ್ಟೆಂಬರ್ 14 ರಿಂದ 18ರ ತನಕ ಸಮಾಜ ಮಂದಿರದಲ್ಲಿ 63ನೇ ವರ್ಷದಲ್ಲಿ ಮೂಡಿಬರುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೊನೆಯ ದಿನದಂದು ರಾತ್ರಿ 8 ಗಂಟೆಗೆ ಹೊರಟ ವೈಭವದ ಶೋಭಾ ಯಾತ್ರೆ 12 ಗಂಟೆಗೆ ಮೊದಲು ಅಲಂಗಾರು ಕೆರೆಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಮೂಲಕ ಮುಗಿಯ ಬೇಕೆಂದು ಎಲ್ಲರೂ ಆಸೆ ಪಟ್ಟಿರುತ್ತಾರೆ.

ಈ ಬಾರಿ ಶೋಭಾ ಯಾತ್ರೆಯಲ್ಲಿ ನಡುವಿನಲ್ಲಿ ಹೆಚ್ಚು ಸಮಯ ವ್ಯರ್ಥವಾಗದಂತೆ ಪ್ರಯತ್ನಿಸಲು ನಿರ್ಧರಿಸಲಾಗಿದೆ. ಸಾಧ್ಯವಿದ್ದಷ್ಟು ಉತ್ತಮ ಮಟ್ಟದ ಟ್ಯಾಬ್ಲೆಗಳನ್ನು ರಚಿಸಿ ಪ್ರದರ್ಶಿಸಲು ಕೇಳಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯು ಎಲ್ಲ ರೀತಿಯ ಸಹಕಾರ ನೀಡಲು ಒಪ್ಪಿಕೊಂಡಿರುತ್ತದೆ. ಮುಸಲ್ಮಾನ ಬಂಧುಗಳು ಕೂಡ ತಾವಾಗಿಯೇ ಹಲವಾರು ಸಹಾಯಗಳನ್ನು ನೀಡಲು ಈಗಾಗಲೇ ಸಂಧಿಸಿರುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ ಎಂ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ, ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ ಸ್ವಾಗತಿಸಿದರು. ವೇದಿಕೆಯಲ್ಲಿ ಅರಮನೆ ಕುಲದೀಪ್ ಎಂ, ಮಾಜಿ ಅಧ್ಯಕ್ಷ ಶ್ರೀಪತಿ ಭಟ್, ಉಪಾಧ್ಯಕ್ಷ ರಾಜಾರಾಮ ನಾಗರಕಟ್ಟೆ, ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಸ್ಪರ್ಧೆ ಸಂಯೋಜಕ ಯತಿರಾಜ್ ಶೆಟ್ಟಿ ಹಾಜರಿದ್ದರು.
ವರದಿ ರಾಯಿ ರಾಜ ಕುಮಾರ್
