ಮೂಡುಮಾರ್ನಾಡ್ ಮುಗೇರ ಕಲ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚಾರಣೆ ಮತ್ತು ಮುದ್ದು ಕೃಷ್ಣ ಸ್ಪರ್ಧೆ

0
30

ಮೂಡುಬಿದಿರೆ : ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗೇರಕಳ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಹಾಗೂ ಅಂಗನವಾಡಿಯ ಪುಟಾಣಿ ಮಕ್ಕಳಿಗೆ ಮುದ್ದು ಕೃಷ್ಣ ವೇಷಧಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುಜಾತರವರು ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂದ ಮೇಲ್ವಿಚಾರಕಿ ವೀಣಾರವರು ಪೌಷ್ಟಿಕ ಆಹಾರದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮೂಡುಬಿದಿರೆ ಪೊಲೀಸ್ ಠಾಣೆಯಿಂದ ಸಬ್ ಇನ್ಸ್ಪೆಕ್ಟರ್ ಪ್ರತಿಭಾ ರವರು ಮೊಬೈಲ್ ಬಳಕೆ ಬಗ್ಗೆ, ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶದ ಬಗ್ಗೆ ಪೋಷಕರು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.

ಹಿರಿಯ ಅರೋಗ್ಯ ಕಾರ್ಯಕರ್ತೆ ನಿವೇದಿತಾ ರವರು ಆರೋಗ್ಯದ ಬಗ್ಗೆ,ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಪೋಷಣ್ ಅಭಿಯಾನದಡಿ ಗರ್ಭಿಣಿ ಸ್ವಾತಿ ಯವರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಬ್ರಹ್ಮಶ್ರೀ, ಪದ್ಮಶ್ರೀ, ನವಶ್ರೀ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು, ಮಕ್ಕಳ ತಾಯಂದಿರು ಅವರವರ ಮನೆಯಲ್ಲಿಯೇ ಸುಮಾರು ಮೂವತ್ತೆರಡು ಬಗೆಯ ಪೌಷ್ಟಿಕ ಆಹಾರವನ್ನು ತಯಾರಿಸಿ ಅಂಗನವಾಡಿ ಕೇಂದ್ರಕ್ಕೆ ತಂದಿದ್ದರು.

ಪೊಲೀಸ್ ಅಧಿಕಾರಿ ಅನ್ನವ್ವ ಎ, ನೀಲಯ್ಯ ಭಂಡಾರಿ, ಮಕ್ಕಳ ಪೋಷಕರು, ಶ್ರೀ ಶಂಕರ ಕಂಬಾಡಿ, ಆಶಾ ಕಾರ್ಯಕರ್ತೆ ಸುಮತಿ, ಸ್ತ್ರೀ ಶಕ್ತಿ ಗುಂಪುಗಳ ಸರ್ವ ಸದಸ್ಯರು, ಕವಿತಾ, ಸೌಮ್ಯ, ಭದ್ರಯ್ಯ,ಭಾಸ್ಕರ,ಅಂಗನವಾಡಿಯ ಪುಟಾಣಿಗಳು ಹಾಗೂ ಸಹಾಯಕಿ ಶ್ವೇತರವರು ಉಪಸ್ತಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶಾಂತಾ ಎಲ್ಲರನ್ನೂ ಸ್ವಾಗತಿಸಿದರು.ಆಶಾ,ಸಂಗೀತ,ಮಲ್ಲಿಕಾ ಪ್ರಾರ್ಥನೆ ಗೈದರು.ಹರ್ಷಾವತಿಯವರು ಧನ್ಯವಾದ ಸಮರ್ಪಿಸಿದರು. ನಾಗಶ್ರೀ ಯವರು ಕಾರ್ಯಕ್ರಮ ನಿರೂಪಿಸಿದರು.

ವರದಿ:ಪ್ರವೀಣ್. ಆರ್. ಕೋಟ್ಯಾನ್ ಮಾರ್ನಾಡ್