ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ‘ನಾಯ್ರಾ’ ನೈಸರ್ಗಿಕ ರತ್ನಾಭರಣ ಸಂಗ್ರಹ ಅನಾವರಣ

0
5

ವಿಶ್ವದ ನಾಲ್ಕನೇ ಅತಿದೊಡ್ಡ ಆಭರಣ ಮಾರಾಟ ಸಂಸ್ಥೆ ಹಾಗೂ ‘ದಿ ರೆಸ್ಪಾನ್ಸಿಬಲ್ ಜುವೆಲರ್’ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್,‘ನಾಯ್ರಾ – Nature’s Finest Gemstones, Crafted into Timeless Masterpieces’ ಎಂಬ ನೂತನ ನೈಸರ್ಗಿಕ ರತ್ನಾಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಸಂಗ್ರಹವು ಸಂಸ್ಥೆಯ ‘ಜೆಮ್‌ಸ್ಟೋನ್ ಜ್ಯುವೆಲ್ಲರಿ ಫೆಸ್ಟಿವಲ್’ ಅಭಿಯಾನದ ಪ್ರಮುಖ ಆಕರ್ಷಣೆಯಾಗಿದೆ. ಉತ್ಸವದ ಅಂಗವಾಗಿ ಗ್ರಾಹಕರು ರತ್ನಾಭರಣ ಹಾಗೂ ಅನ್‌ಕಟ್ ಜ್ಯುವೆಲ್ಲರಿಗಳ ಮೇಕಿಂಗ್ ಚಾರ್ಜ್‌ಗಳ ಮೇಲೆ 25% ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಈ ವಿಶೇಷ ಕೊಡುಗೆ 2026ರ ಸೆಪ್ಟೆಂಬರ್ 14ರವರೆಗೆ ಲಭ್ಯವಿರಲಿದೆ.

ಪ್ರಕೃತಿಯ ಅಪರೂಪದ ಅಮೂಲ್ಯ ರತ್ನಗಳ ಸೌಂದರ್ಯದಿಂದ ಪ್ರೇರಿತವಾಗಿರುವ ನಾಯ್ರಾ ಸಂಗ್ರಹವು ಸಾಂಪ್ರದಾಯಿಕ ಚಿಲ್ಲೈ ಮತ್ತು ಪಚಿ ಕರಕುಶಲತೆಯ ಕಲಾತ್ಮಕತೆಯನ್ನು ಒಳಗೊಂಡಿದೆ. ಚಿನ್ನದಲ್ಲಿ ರೂಪುಗೊಂಡು ಅಮೂಲ್ಯ ನೈಸರ್ಗಿಕ ರತ್ನಗಳಿಂದ ಅಲಂಕರಿಸಲ್ಪಟ್ಟ ಈ ಆಭರಣಗಳು ಶಿಲ್ಪಕಲೆಯ ಸೊಗಡು ಹಾಗೂ ಸೂಕ್ಷ್ಮ ವಿನ್ಯಾಸಗಳ ಮೂಲಕ ಸಾಂಪ್ರದಾಯಿಕ ರತ್ನಾಭರಣಗಳಿಗೆ ಹೊಸ ರೂಪವನ್ನು ನೀಡುತ್ತವೆ. ಹೊಸ ತಲೆಮಾರಿನ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ವಿನ್ಯಾಸಗೊಳಿಸಲ್ಪಟ್ಟ ಈ ಸಂಗ್ರಹವು ಕರಕುಶಲತೆ, ವೈಶಿಷ್ಟ್ಯತೆ ಹಾಗೂ ಆಕರ್ಷಕ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ನಾಯ್ರಾ ಸಂಗ್ರಹದ ಜೊತೆಗೆ, ಜೆಮ್‌ಸ್ಟೋನ್ ಜ್ಯುವೆಲ್ಲರಿ ಫೆಸ್ಟಿವಲ್‌ನಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಆಯ್ದ ರತ್ನಾಭರಣ ಹಾಗೂ ಅನ್‌ಕಟ್ ಜ್ಯುವೆಲ್ಲರಿ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗ್ರಾಹಕರು ನೈಸರ್ಗಿಕ ರತ್ನಾಭರಣಗಳ ವೈಭವವನ್ನು ಸಮೀಪದಿಂದ ಅರಿಯುವ ಅಪೂರ್ವ ಅವಕಾಶವನ್ನು ಪಡೆಯಲಿದ್ದಾರೆ.

ಮಂಗಳೂರು ಶೋರೂಂನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ‘ನಾಯ್ರಾ’ ಸಂಗ್ರಹವನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಮಾಡೆಲ್‌ ಕುಮಾರಿ ಸುಷ್ಮಿತಾ ಆರ್., ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ನಿಷ್ಠಾವಂತ ಗ್ರಾಹಕರಾದ ಶ್ರೀಮತಿ ಮಲ್ಲಿಕಾ ಪೂಜಾರಿ ಹಾಗೂ ಶ್ರೀಮತಿ ಅಶ್ವಿತಾ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶೋರೂಂನ ಸ್ಟೋರ್ ಹೆಡ್ ಶ್ರೀ ಹಫೀಜ್ ರೆಹ್ಮಾನ್, ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಶ್ರೀ ಮೊಹಮ್ಮದ್ ಸಮೀರ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಶೇಕ್ ಫರ್ಹಾನ್ ಉಪಸ್ಥಿತರಿದ್ದರು.

ಮಲಬಾರ್ ಗೋಲ್ಡ್ & ಡೈಮಂಡ್ಸ್ ಬಗ್ಗೆ:
1993ರಲ್ಲಿ ಸ್ಥಾಪನೆಯಾದ ಮಲಬಾರ್ ಗೋಲ್ಡ್ & ಡೈಮಂಡ್ಸ್, ವೈವಿಧ್ಯಮಯ ವ್ಯವಹಾರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಮಲಬಾರ್ ಗ್ರೂಪ್‌ನ ಪ್ರಮುಖ ಸಂಸ್ಥೆಯಾಗಿದೆ. ವಾರ್ಷಿಕ 9.41 ಬಿಲಿಯನ್ ಅಮೆರಿಕನ್ ಡಾಲರ್ ವಹಿವಾಟು ಹೊಂದಿರುವ ಈ ಸಂಸ್ಥೆ ಪ್ರಸ್ತುತ ವಿಶ್ವದ ನಾಲ್ಕನೇ ಅತಿದೊಡ್ಡ ಆಭರಣ ಚಿಲ್ಲರೆ ಮಾರಾಟ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಭಾರತ, ಮಧ್ಯಪ್ರಾಚ್ಯ, ದೂರ ಪೂರ್ವ, ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸೇರಿದಂತೆ 14 ದೇಶಗಳಲ್ಲಿ 450 ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದೆ. 3,500 ಕ್ಕೂ ಹೆಚ್ಚು ಷೇರುದಾರರು ಹಾಗೂ 26 ಕ್ಕೂ ಹೆಚ್ಚು ರಾಷ್ಟ್ರಗಳ 30,000 ಕ್ಕೂ ಅಧಿಕ ವೃತ್ತಿಪರರು ಸಂಸ್ಥೆಯ ನಿರಂತರ ಬೆಳವಣಿಗೆಗೆ ಕೈಜೋಡಿಸುತ್ತಿದ್ದಾರೆ.