ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಗಣೇಶೋತ್ಸವ ಪ್ರಯುಕ್ತ “ಅಂಚೆ ಕುಂಚ” 50 ಪೈಸೆಯ ಅಂಚೆ ಕಾರ್ಡಿನಲ್ಲಿ ಉಚಿತ ಚಿತ್ರ ಬರೆಯುವ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ ಎಂದು ತೀರ್ಪುಗಾರರು, ಕಲಾವಿದರರಾದ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಲಾಗಿದೆ.
ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಬೆಂಗಳೂರಿನ ಕುಮಾರಿ ನವ್ಯ ಮನೋಹರ ಪೈ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾಜೇಶ್ ಡಿ.ಶೇಟ್, ದ್ವಿತೀಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪದ ಸತೀಶ್‌ನಾಯ್ಕ, ತೃತೀಯ ಬಹುಮಾನ ಸಮಾಧಾನಕರ ಬಹುಮಾನಗಳು ದಾವಣಗೆರೆಯ ಡಿ.ಶಿವಣ್ಣ, ತಮಕೂರು ಜಿಲ್ಲೆಯ ಚಿನಾಹಳ್ಳಿ ತಾಲ್ಲೂಕಿನ ಹುಳೆಯಾರು ಶ್ವೇತಾ ಹೆಚ್.ವಿ. ದಾವಣಗೆರೆಯ ಕುಮಾರಿ ವರ್ಷಿತಾ ಎ., ದಾವಣಗೆರೆಯ ಕುಮಾರಿ ರಶ್ಮಿ. ಸಿ.ಎಸ್. ದಾವಣಗೆರೆ ಜಿಲ್ಲೆಯ ಹನುಮಂತಾಉರದ ಸುಚಿತ್ರ ಟಿ. ಪಡೆದಿರುತ್ತಾರೆ.
ಕಿರಿಯರ ವಿಭಾಗ ಪ್ರಥಮ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕುಮಾರ ನಾರಾಯಣ ಮನೋರಹ ಪೈ, ಹುಬ್ಬಳ್ಳಿಯ ಯರಗೊಪ್ಪದ ಕುಮಾರಿ ಸಾನ್ವಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಮಾರ ತ್ರಿನಯ ಎಸ್.ಕುಮಾರ್, ದಾವಣಗೆರೆಯ ಕುಮಾರಿ ಮಾನ್ಯ ಸಂದೀಪ್ ಶೆಣೈ, ತೃತೀಯ ಬಹುಮಾನ ದಾವಣಗೆರೆಯ ಕುಮಾರಿ ಅನನ್ಯ ಎನ್., ದಾವಣಗೆರೆಯ ಕುಮಾರ ದಿನೇಶ್ ಎನ್. ಪಡೆದಿದ್ದು, ಸಮಾಧಾನಕರ ಬಹುಮಾನಗಳು ಶಿವಮೊಗ್ಗದ ಕುಮಾರಿ ಸುಮ ಚಿಕ್ಕಮಗಳೂರಿನ ಕುಮಾರಿ ಕೃತು ಎಸ್.ಆರ್. ಪಡೆದಿರುತ್ತಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಪ್ರಕಟಿಸಿದ್ದಾರೆ.
ಯಾವುದೇ ಸಭೆ, ಸಮಾರಂಭಗಳಿಲ್ಲದೇ ಬಹುಮಾನ ವಿಜೇತರಾದವರ ಅವರವರ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ ಅಭಿನಂದನಾ ಪತ್ರ ಕಳಿಸುತ್ತೇವೆ. ಕಲಾಕುಂಚದ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಬಹುಮಾನ ವಿಜೇತರಿಗೆ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

