ಕಾಸರಗೋಡು ಸೂರ್ಲು ಶ್ರೀ ಗಣೇಶ ಭಜನಾ ಮಂದಿರದಲ್ಲಿ ನಡೆದ ಶ್ರೀ ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಜೈ ಹಿಂದ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಸೂರ್ಲು ಇವರು ವಹಿಸಿದರು.
ಸಭೆಯಲ್ಲಿ ಕಾಸರಗೋಡಿನ ಧಾರ್ಮಿಕ ಮುಂದಾಳು ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ಇವರಿಗೆ ಶಾಲು, ಪೇಟ, ಹಾರ, ಸ್ಮರಣಿಕೆ ಹಾಗೂ ಗೌರವ ಸನ್ಮಾನ ಪತ್ರ ನೀಡಿ ಗೌರವಿಸಿದರು.
ಗೋಕುಲ ಜಿಲ್ಲಾ ಕಾರ್ಯದರ್ಶಿ ಶ್ರೀ ರಾಜೇಂದ್ರ ಮವ್ವಾರು ಧಾರ್ಮಿಕ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ವಿನಯ್ ಕುಮಾರ್ ಸೂರ್ಲು ಶ್ರೀ ಕೃಷ್ಣ ಟ್ರೆಡಿಂಗ್ ಕಂಪನಿ, ದಿನೇಶ್ ಎಂ.ಟಿ ಸೇವಾಭಾರತಿ ಕಾಸರಗೋಡು ಜಿಲ್ಲಾಧ್ಯಕ್ಷರು ಹಾಗೂ ಶ್ರಿ ಗಣೇಶ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ, ಮಂದಿರ ನವೀಕರಣ ಅಧ್ಯಕ್ಷ ಸುರೇಶ್ ಕೆ, ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ರಮಣಿ ಸೂರ್ಲು ಉಪಸ್ಥಿತರಿದ್ದರು. ಜೈ ಹಿಂದ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ಜತೆ ಕಾರ್ಯದರ್ಶಿ ವಿಜಿತ್ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಗಣೇಶ್ ಶೆಟ್ಟಿ ಧನ್ಯವಾದವಿತ್ತು, ಸನ್ಮಾನ ಪತ್ರವನ್ನು ಮಂದಿರದ ಹಿರಿಯರಾದ ರಘುರಾಮ ವಾಚಿಸಿದರು.

