ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಳಿಕೆ ವಲಯ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ನಾಟೆಕಲ್ ಮಂಗಳೂರು (7353774782) ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ : 13-09-2026 ಆಧಿತ್ಯವಾರದಂದು ಅಳಿಕೆ ಪಂಚಾಯತ್ ಸಭಾಂಗಣದಲ್ಲಿ ಉಚಿತವಾಗಿ ಕ್ಯಾನ್ಸರ್ ಕಾಯಿಲೆ ಮುಂಜಾಗ್ರತ ಮಾಹಿತಿ ಮತ್ತು ಆರೋಗ್ಯ ತಪಾಸಣಾ ಶಿಬಿರ ಹಾಗೂ ವೈದ್ಯಕೀಯ ನೇತ್ರ ತಪಾಸಣಾ ಶಿಬಿರ ನಡೆಯಿತು.

ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಕಿವಿ -ಮೂಗು- ಗಂಟಲು ತಜ್ಞರು ನೇತ್ರ ತಜ್ಞರು ವಿಶೇಷವಾಗಿ ಸೇವೆ ನೀಡಿದರು.
ಶ್ರೀ ಬಾಲಕೃಷ್ಣ ಪೂಜಾರಿ ಸಣ್ಣ ಗುತ್ತು ನಿಕಟ ಪೂರ್ವ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಅಧ್ಯಕ್ಷತೆಯಲ್ಲಿ ಮೂಡಿ ಬಂದ ಕಾರ್ಯಕ್ರಮ, ಚಂದ್ರಶೇಖರ ಭಟ್ ಕಾರ್ಯದರ್ಶಿಗಳು ಶ್ರೀ ಸತ್ಯ ಸಾಯಿ ಲೋಕಸೇವಾ ವಿದ್ಯಾ ಸಂಸ್ಥೆ ಅಳಿಕೆ ಇವರು ಉದ್ಘಾಟನೆ ಮಾಡಿದರು.
, ಶ್ರೀ ಕೆ. ಟಿ ಆನಂದ ಪೂಜಾರಿ ಯುವವಾಹಿನಿ (ರಿ ) ವಿಟ್ಲ, ಡಾ.ಮುರಳಿ ವೈದ್ಯಾಧಿಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರ ಅಳಿಕೆ,
ಸಾಯಿ ಗೀತಾ ಕೃಷಿಕರು ಚಂದಾಡಿ, ಶ್ರೀ ರೂಪೇಶ್ ರೈ ಅಳಿಕೆಗುತ್ತು ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ ) ಅಳಿಕೆ, ಶ್ರೀ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಅಳಿಕೆ, ಶ್ರೀ ಚಂದ್ರಶೇಖರ ಬೆಲ್ಚಾಡ ಅರ್ಚಕರು ಬೊಲ್ನಾಡು ಶ್ರೀ ಭಗವತಿ ಕ್ಷೇತ್ರ, ಶ್ರೀ ಸಂಧೇಶ್ ಕೆ ಅಧ್ಯಕ್ಷರು ಸಂಗಮ ಯುವಕ ಮಂಡಲ ಪಡಿಬಾಗಿಲು, ಅಳಿಕೆ, ಶ್ರೀ ಪ್ರವೀಣ ಪೂಜಾರಿ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ಮೊದಲಾದ ಪ್ರಮುಖರು ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಧಿಕಾರಿಗಳು, ಸೇವಾಪ್ರತಿನಿಧಿಗಳು ಮತ್ತು ಅಧ್ಯಕ್ಷರು ಉಪಸ್ಥಿತರಿದ್ದರು.

