ಶಿರ್ತಾಡಿಯಲ್ಲಿ ಮಂಗನ ದಾಳಿ: ಇಬ್ಬರು ಆಸ್ಪತ್ರೆಗೆ

0
18

ಮಂಗವೊಂದು ದಾಳಿ ನಡೆಸಿದ ಪರಿಣಾಮ ಶಿರ್ತಾಡಿ ಪರಿಸರಸ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇತ್ತೀಚೆಗೆ ನಡೆದಿದೆ.

ಶಿರ್ತಾಡಿ ಕಜೆ ಪರಿಸರದ ಬಲರಾಮ ಭಟ್ ಹಾಗೂ ಅಳಿಯೂರಿನ ವನಿತ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.
‌ ಮೊದಲಿಗೆ ಶಿರ್ತಾಡಿ ಕಜೆಯಲ್ಲಿದ್ದ ಮಂಗವು ಬಲರಾಮ ಭಟ್ ಅವರ ಮೇಲೆ ದಾಳಿ ನಡೆಸಿತ್ತು.ಬಳಿಕ ಅಳಿಯೂರಿಗೆ ಹೋದ ಮಂಗವು ಅಲ್ಲಿನ ವನಿತ್ ಅವರ ಮೇಲೂ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ಮಂಗನ ದಾಳಿಗೊಳಗಾದ ಇಬ್ಬರೂ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗನ ಒಂದು ಕೈ ಗೆ ಗಾಯವಾಗಿದೆಯೆನ್ನಲಾಗುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಹಿಡಿಯಲು ಪ್ರಯತ್ನಪಟ್ಟಿದ್ದಾರೆ.ಮಂಗನ ದಾಳಿಯಿಂದ ಸ್ಥಳೀಯ ಪರಿಸರದ ಜನರು ಆತಂಕಕ್ಕೊಳಗಾಗಿದ್ದಾರೆ