ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ ವತಿಯಿಂದ “ಲಯನೋಣಂ” ಕಾರ್ಯಕ್ರಮ

0
28

ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ ವತಿಯಿಂದ “ಲಯನೋಣಂ” ಕಾರ್ಯಕ್ರಮವನ್ನು ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲೆ 317Dರ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಗೋವರ್ಧನ್ ಶೆಟ್ಟಿ, MJF ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‌ನ ಚಾರ್ಟರ್ ಅಧ್ಯಕ್ಷ ಲಯನ್ ವಿಜಯನ್ ಕೆ. ವಹಿಸಿದ್ದರು. ಈ ಸಂದರ್ಭದಲ್ಲಿ ಲಯನ್ ಕೆ. ವಿಜಯಕುಮಾರ್ ಹಾಗೂ ಲಯನ್ ದಾಮೋದರನ್ ಡಿ. ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕ್ಲಬ್‌ನ ವಿವಿಧ ಸೇವಾ ಚಟುವಟಿಕೆಗಳ ವಿವರಗಳನ್ನು ಕಾರ್ಯದರ್ಶಿ ಲಯನ್ ಕೆ ಗೋಪಿನಾಥ್ ಮಂಡಿಸಿದರು. ಲಯನ್ ರಾಧಿಕಾ ಮಹೇಶ್ ಸ್ವಾಗತಿಸಿದರು. ಖಜಾಂಚಿ ಲಯನ್ ನಿತೀಶ್ ಕೃಷ್ಣ ಅವರು ವಂದನಾರ್ಪಣೆ ಸಲ್ಲಿಸಿದರು.

ಓಣಂ ಆಚರಣೆಯ ಅಂಗವಾಗಿ ಸದಸ್ಯರು ಹಾಗೂ ಅವರ ಕುಟುಂಬದವರಿಂದ ಸಾಂಪ್ರದಾಯಿಕ ಓಣಂ ಪೂಕಳಂ, ಅದ್ದೂರಿ ಓಣಂ ಸದ್ಯ, ತಿರುವಾತಿರ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಾಂಪ್ರದಾಯಿಕ ಆಟಗಳು ಮತ್ತು ಇತರ ಮನರಂಜನಾ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಸದಸ್ಯರು ಹಾಗೂ ಕುಟುಂಬದವರು ಒಗ್ಗೂಡಿ ಆಚರಿಸಿದ ಈ ಕಾರ್ಯಕ್ರಮವು ಸೌಹಾರ್ದತೆ, ಕುಟುಂಬ ಬಾಂಧವ್ಯ ಮತ್ತು ಸೇವಾ ಮನೋಭಾವದ ಸುಂದರ ಸಂದೇಶವನ್ನು ಸಾರಿತು. ಲಯನ್ಸ್ ಕ್ಲಬ್ ಸೋಮೇಶ್ವರದ “Inspiring Steps – Serve Together” ಎಂಬ ಧ್ಯೇಯಕ್ಕೆ ಅನುಗುಣವಾಗಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.