ಡಾ. ಕೆ. ಎನ್. ಅಡಿಗರಿಗೆ ಧನ್ವಂತರಿ ಪ್ರಶಸ್ತಿ ಪ್ರದಾನ

0
1

ಬೆಂಗಳೂರು: ಉಪಾಧ್ಯ ಪ್ರತಿಷ್ಠಾನದ ವತಿಯಿಂದ ರಾಮಚಂದ್ರ ಉಪಾಧ್ಯ ರವರು ನವೆಂಬರ್ 1, 2026 ರಾಜ್ಯೋತ್ಸವ ದಿನ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಗಣ್ಯರಾದ ಡಾ. ಕೆ. ಎನ್. ಅಡಿಗ ಅಡೂರು ಅವರಿಗೆ ಪ್ರತಿಷ್ಠಿತ ಧನ್ವಂತರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ನಡೆದ ಸಮಾರಂಭದಲ್ಲಿ ವೈದ್ಯಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಅತಿಥಿಗಳಾಗಿ ಡಾ. ಉದಯ ಗರುಡಾಚಾರ್, ಡಾ. ಟಿ . ಎ.ಬಾಲಕೃಷ್ಣ ಅಡಿಗ, ಕಾರ್ಕಡ ಗಣೇಶ ಐತಾಳ್, ಗೋಕುಲ ದಾಸ್ ಪೈ ಇದ್ದರು. ಜಿ ಶ್ರೀನಿವಾಸ ರಾವ್, ಡಾಕ್ಟರ್ ಕಿಶೋರ್ ಕುಮಾರ್ , ನೀಲಕಂಠ ಅಡಿಗ ಇವರುಗಳು ಪ್ರಶಸ್ತಿ ಗೆ ಭಾಜನರಾದರು.

ಕನ್ನಡ ಮತ್ತು ತುಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರೂಪಕರಾಗಿ, ಸಂಘಟಕರಾಗಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಕೆ. ಎನ್. ಅಡಿಗ ಅವರು ತಮ್ಮ ವಿಶಿಷ್ಟ ಸೇವೆ ಮತ್ತು ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ.

ಅವರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಧನ್ವಂತರಿ ಪ್ರಶಸ್ತಿ ನೀಡಿ ಗೌರವಿಸಿರುವುದು ಅವರ ಅಭಿಮಾನಿಗಳು, ಹಿತೈಷಿಗಳು ಮತ್ತು ಸಾಂಸ್ಕೃತಿಕ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.