ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಸೆ. 26ರಂದು ರಾಷ್ಟ್ರೀಯ ಬಹುಶಿಸ್ತೀಯ ಸಮ್ಮೇಳನ

0
8

ಮೂಡುಬಿದಿರೆ : ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ ಕುರಿತು ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಸಂಘದ ವತಿಯಿಂದ ರಾಷ್ಟ್ರೀಯ ಬಹುಶಿಸ್ತೀಯ ಸಮ್ಮೇಳನ ಸಪ್ಟೆಂಬರ್ 26ರಂದು ಮೂಡಬಿದಿರೆ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ. ಸಂಘದ ಹಾಗೂ ಕಾಲೇಜಿನ ಆಶಯದಂತೆ ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯ ಭಾರತ, ಮತ್ತು ಉದ್ಯಮಶೀಲತೆಯ ಸಮಗ್ರ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯತ್ತ ಮಾರ್ಗಗಳು ಎಂಬ ವಿಷಯದ ಕುರಿತು ಸಮ್ಮೇಳನವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಶೈಕ್ಷಣಿಕ ಚರ್ಚೆ, ಸಂಶೋಧನಾ ಬೆಳವಣಿಗೆ, ವಿಚಾರ ವಿನಿಮಯ ಮತ್ತು ಹೊಸ ಆಲೋಚನೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಳ್ಳುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಸರಕಾರದ ಆಶಯದಂತೆ ಕೌಶಲ್ಯ ಅಭಿವೃದ್ಧಿ ಮತ್ತು ಮಾನವ ಬಂಡವಾಳ, ಉದ್ಯಮಶೀಲತೆ ಹಾಗೂ ಸ್ಟಾರ್ಟಪ್, ಬ್ಯಾಂಕಿಂಗ್ ಮತ್ತು ಹಣಕಾಸು ಸುಸ್ಥಿರತೆ, ಹಸಿರು ಉದ್ಯಮಶೀಲತೆ, ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಕುರಿತು ವಿಚಾರ ವಿನಿಮಯಗಳು ನಡೆಯಲಿದೆ.

ಬೆಳಗ್ಗೆ 9.45ಕ್ಕೆ ಮಾಹೆ ಪ್ರೊ ಛಾನ್ಸ್ ಲರ್, ಎ ಜಿ ಇ ಅಧ್ಯಕ್ಷ ಎಚ್ ಎಸ್ ಬಲ್ಲಾಳ ಉದ್ಘಾಟಿಸಲಿದ್ದಾರೆ. ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ. ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕ ಎಂ ರವೀಂದ್ರ ರೈ ಮುಖ್ಯ ಅತಿಥಿ. ಪ್ರಧಾನ ಭಾಷಣಕಾರರಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಫಿನ್ ಟೆಕ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಸ್ವಪ್ನಿಲ್ ಶಾನು ಭಾರ್ಗವ್, ಸಮ್ಮೇಳನದ ತಾಂತ್ರಿಕ ಅಧಿವೇಶನದಲ್ಲಿ ವಿಕಸಿತ ಭಾರತ ಮತ್ತು 2047 ರತ್ತ ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ.

ಮಧ್ಯಾಹ್ನ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮಂಡನೆ. ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ. ಸಂಜೆ ಸಮಾರೋಪ ಸಮಾರಂಭದಲ್ಲಿ ಡಾ ಶ್ರೀಪತಿ ಕಲ್ಲೂರಾಯರಿಂದ ಭಾಷಣ. ಪ್ರಾಂಶುಪಾಲ ಡಾ ರಾಧಾಕೃಷ್ಣರಿಂದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾಲೇಜಿನ ಪ್ರಾಂಶುಪಾಲ ಡಾ ರಾಧಾಕೃಷ್ಣ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ ಹರೀಶ್, ಉಡುಪಿಯ ಅರ್ಥಶಾಸ್ತ್ರ ವಿಭಾಗದ ಮಾಜಿ ಸಹ ಪ್ರಾಧ್ಯಾಪಕ ಪ್ರೊ ಎಂ ಚನ್ನ ಪೂಜಾರಿ, ಅರ್ಥಶಾಸ್ತ್ರ ಸಂಘದ ಅಧ್ಯಕ್ಷರು ಶ್ರೀಲತಾ ಕಮಿಲ, ಕಾರ್ಯದರ್ಶಿ ಅಜಿಲ್ ಮೇಲ್ವಿನ್ ಕ್ಯಾಸ್ಟಲ್ಲಿನೋ, ಗೀತಾ ಕುಮಾರಿ, ಶ್ರೀ ಗೌರಿ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್