ಮೆಸ್ಕಾಂ ಮೂಡುಬಿದಿರೆ ವಿಭಾಗದ ಕುಂದು ಕೊರತೆ-ಜನ ಸಂಪರ್ಕ ಸಭೆ

0
10

ಮೆಸ್ಕಾಂನ ಮೂಡುಬಿದಿರೆ ವಿಭಾಗದ ಗ್ರಾಹಕರ ಕುಂದು ಕೊರತೆ ನಿವಾರಣೆ ಹಾಗೂ ಜನ ಸಂಪರ್ಕ ಸಭೆ ಸಪ್ಟೆಂಬರ್ 22 ರಂದು ಮೂಡುಬಿದಿರೆ ಮೆಸ್ಕಾಂ ಕಚೇರಿಯಲ್ಲಿ ನಡೆಯಿತು. ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದ ಸೂಪರ್ ಇಂಟೆಂಡೆಂಟ್ ಇಂಜಿನಿಯರ್ ಕೃಷ್ಣರಾಜ ಕೆ ಸುಮಾರು 343 ಕಂಪ್ಲೇಂಟುಗಳು ದಾಖಲೆಯಾಗಿದ್ದು ಅವುಗಳಲ್ಲಿ 300ರಷ್ಟು ಈಗಾಗಲೇ ನಿವಾರಿಸಲ್ಪಟ್ಟಿದೆ. ಉಳಿದ ಕೆಲವು ದೂರಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ನಿರ್ಧರಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ.

ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್, ರಾಜೇಶ್ ಕಡಲಗೆರೆ, ಇತ್ಯಾದಿಯರು ಹೆಚ್ಚಿನ ವಿದ್ಯುತ್ ಕಂಬಗಳಲ್ಲಿ ಜನರ ತಲೆ, ಕುತ್ತಿಗೆಯ ಎತ್ತರದಲ್ಲಿ ನೇತಾಡುತ್ತಿರುವ ಇಂಟರ್ನೆಟ್ ನ ವಯರುಗಳನ್ನು ಆದಷ್ಟು ಶೀಘ್ರ ಎತ್ತರಕ್ಕೆಳೆದು ಕಟ್ಟಬೇಕೆಂದು ಆಗ್ರಹಿಸಿದರು. ತಕ್ಷಣ ಅದೆಲ್ಲವನ್ನು ಕೂಡ ಸರಿಪಡಿಸುವಂತೆ ಸಹಾಯಕ ಇಂಜಿನಿಯರ್ಗಳಾದ ಪ್ರವೀಣ್, ಕಲ್ಲಮುಂಡ್ಕೂರು ಜೆ.ಇ.ಪ್ರಥಮ್ ಶೆಟ್ಟಿ, ಬೆಳುವಾಯಿ ಜೆ.ಇ. ಗೇಮಾ ನಾಯ್ಕ, ಅವರಿಗೆ ಆದೇಶಿಸಿದರು.

ಗ್ರಹ ಜ್ಯೋತಿ ಯೋಜನೆಯ ಬಗ್ಗೆ ಪ್ರಶ್ನಿಸಿದಾಗ ಈಗಾಗಲೇ ಮನೆ ಬಾಗಿಲು ಹಾಕಿರುವ ಮನೆಯವರಿಗೆ ನೋಟಿಸು ನೀಡಿದ್ದು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿ 95 ಶೇಕಡಾದಷ್ಟು ಯಶಸ್ಸನ್ನು ಸಾಧಿಸಲಾಗಿದೆ ಎಂದು ಕಾರ್ಯವಾಹ ಇಂಜಿನಿಯರ್ ಅಭಿಷೇಕ್ ಬಿ ಎಸ್, ಸಹಾಯಕ ಕಾರ್ಯವಾಹ ಇಂಜಿನಿಯರ್ ರಾಮಕೃಷ್ಣ ಐತಾಳ್ ಸಭೆಗೆ ತಿಳಿಸಿದರು. ವಾರದ ಒಂದೇ ದಿನದಲ್ಲಿ ಎಲ್ಲಾ ಕಡೆಯೂ ದುರಸ್ತಿಯನ್ನು ಮಾಡುವ ಬದಲು ಒಂದೊಂದು ವಿಭಾಗಕ್ಕೆ ದಿನಗಳನ್ನು ನಿರ್ಧರಿಸಿ ಗ್ರಾಹಕರಿಗೆ ಮುಂದಾಗಿ ತಿಳಿಸಿ ದುರಸ್ತಿಯ ಕಾರ್ಯಗಳನ್ನು ನಡೆಸುವಂತೆ ಅಧಿಕಾರಿಗಳು ನಿರ್ದೇಶಿಸಿದರು.

ವರದಿ ರಾಯಿ ರಾಜ ಕುಮಾರ್