ರೇಡಿಯೊ ಮಣಿಪಾಲದಲ್ಲಿ ‘ನಾಡೋಜ ಕಯ್ಯಾರ ಕಿಂಞಣ್ಞ ರೈ ನೆಂಪು ಕಿನ್ಯ ಜೋಕ್ಲೆಡ್ದ್ ಸೊರ ಸಂಪು ಪ್ರಸಾರ

0
23

ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಕೇಂದ್ರವು ತುಳುಕೂಟ (ರಿ) ಉಡುಪಿ ಸಹಯೋಗದಲ್ಲಿ ಅರ್ಪಿಸುತ್ತಿದೆ ನಾಡೋಜ ಕಯ್ಯಾರ ಕಿಂಞಣ್ಞ ರೈ ನೆಂಪು ಕಿನ್ಯ ಜೋಕ್ಲೆಡ್ದ್ ಸೊರ ಸಂಪು ಬಾನುಲಿ ತುಳು ಸರಣಿ ಕಾರ್ಯಕ್ರಮ. ಈ ಸರಣಿಯ 1 ನೇ ಸಂಚಿಕೆ *ಸೆಪ್ಟೆಂಬರ್ ತಿಂಗಳ ದಿನಾಂಕ 23 ರಂದು ಬುಧವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮವನ್ನು ಉಡುಪಿಯ ಮುಕುಂದ ಕೃಪ ಶಾಲೆಯ ಮಕ್ಕಳು ನಡೆಸಿಕೊಡಲಿದ್ದಾರೆ. ಸೆಪ್ಟೆಂಬರ್ 24 ರಂದು ಮಧ್ಯಾಹ್ನ 2.30ಕ್ಕೆ ಇದರ ಮರುಪ್ರಸಾರವಿರುವುದು.
ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.