ಲಯನ್ಸ್ ಕ್ಲಬ್ ಪ್ರಕೃತಿ ವತಿಯಿಂದ ಸಮಾಜಮುಖಿ ಕಾರ್ಯಕ್ರಮ

0
10

ಉಡುಪಿ : ಲಯನ್ಸ್ ಕ್ಲಬ್ ಉಡುಪಿ ಪ್ರಕೃತಿ ವತಿಯಿಂದ ನಗರದ ಟೌನ್‌ಹಾಲ್‌ನಲ್ಲಿ ವಲಯ 2 ಅಧ್ಯಕ್ಷ ಶೇಖರ್ ಡಿ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಝೋನ್ ಸೋಶಿಯಲ್ ಕಾರ್ಯಕ್ರಮ ನಡೆಯಿತು.

ಇಂಜಿನಿಯರ್ಸ್ ಡೇ ಪ್ರಯುಕ್ತ ಏಕನಾಥೇಶ್ವರಿ ಕನ್ಸ್ಟ್ರಕ್ಷನ್ ಮಾಲೀಕರಾದ ಪ್ರಾಣೇಶ್ . ಅವರನ್ನು ಸನ್ಮಾನಿಸಲಾಯಿತು. ಶ್ರೀ ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನ್ ಟ್ರಸ್ಟ್ ವತಿಯಿಂದ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಮಾನ್ಯದಲ್ಲಿರುವ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜಿಗೆ ಧನಸಹಾಯ ನೀಡಲಾಯಿತು. ಶಿರ್ವ ಕಾಪುವಿನ ಶ್ರೀಮತಿ ಸತ್ಯವತಿ ವಿ. ಶೆಟ್ಟಿ ಅವರಿಗೆ ಮನೆ ದುರಸ್ತಿ ಕಾರ್ಯಕ್ಕಾಗಿ ಆರ್ಥಿಕ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪ್ರಕೃತಿ ಅಧ್ಯಕ್ಷ ಪ್ರಮೋದ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಶೆಟ್ಟಿ, ಪರ್ಕಳ ಕ್ಲಬ್ ಅಧ್ಯಕ್ಷ ಅಭಿರಾಜ್ ಸುವರ್ಣ, ಕಾರ್ಯದರ್ಶಿ ಶ್ರೀವತ್ಸ, ಕೋಶಾಧಿಕಾರಿ ಭಗೀರಥ ಎಂ. ಸಾಲಿಯಾನ್, ಕಲ್ಯಾಣಪುರ-ಸಂತೆಕಟ್ಟೆ ಕ್ಲಬ್ ಕಾರ್ಯದರ್ಶಿ ಅರುಣ್ ಮೆಲ್ವಿನ್ ಮೆನೇಜಸ್, ಉದ್ಯಾವರ ಕ್ಲಬ್ ಅಧ್ಯಕ್ಷೆ ರೇಣುಕಾ ವಿ., ಕಾರ್ಯದರ್ಶಿ ನಯನ್ ಗಣೇಶ್ ಹಾಗೂ ಕೋಶಾಧಿಕಾರಿ ಶಿಲ್ಪಾ ಆರ್. ಕೋಟ್ಯಾನ್ ಉಪಸ್ಥಿತರಿದ್ದರು.

ಪ್ರಾಂತೀಯ ಅಧ್ಯಕ್ಷ ಲೂಯಿಸ್ ಲೋಬೊ, ಕಾರ್ಯದರ್ಶಿ ಗಿರೀಶ್ ಐತಾಳ್, ವಲಯ 1 ಅಧ್ಯಕ್ಷ ದಿನೇಶ್ ಕಿಣಿ, ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಪ್ರಕೃತಿ ಕ್ಲಬ್ ಹಾಗೂ ವಿವಿಧ ಲಯನ್ಸ್ ಕ್ಲಬ್‌ಗಳ ಸದಸ್ಯರು ಪಾಲ್ಗೊಂಡಿದ್ದರು.

ಪ್ರಕೃತಿ ಕ್ಲಬ್ ಸದಸ್ಯ ಬೆಳ್ಳೆ ಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಪ್ರಮೋದ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಶಿರೂರು ಕ್ಲಬ್‌ನ ವಿವಿಧ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ,ಬಳಿಕ ಧನ್ಯವಾದ ತಿಳಿಸಿದರು .