ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ದ ಕ ಜಿಲ್ಲಾ ಅಧ್ಯಕ್ಷರಾಗಿ ಪದ್ಮರಾಜ್ ಆರ್ ಪೂಜಾರಿ ಸೆಪ್ಟೆಂಬರ್ 24ರಂದು ಪದಗ್ರಹಣ ಗೈದರು. ಮಂಗಳೂರು ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷ ಹರೀಶ್ ಕುಮಾರ್ ಪಕ್ಷದ ಧ್ವಜವನ್ನು ಪದ್ಮರಾಜ್ ಪೂಜಾರಿ ಅವರಿಗೆ ನೀಡುವ ಮೂಲಕ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ನ ಅತ್ಯಂತ ಹಿರಿಯ ನೀತಾರ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಹರೀಶ್ ಕುಮಾರ್ ಅವರಿಂದ ಪಕ್ಷದ ಧ್ವಜವನ್ನು ಪದ್ಮರಾಜ್ ಪೂಜಾರಿ ಅವರಿಗೆ ಹಸ್ತಾಂತರಿಸಿದರು. ನಗುನಗುತ ಸೇವೆಯನ್ನು ನೀಡಿ, ದುಃಖಗಳು ನಗುವಾಗಿ ಪರಿವರ್ತಿತವಾಗಲಿ. ಕೊರತೆಯಾಗದಂತೆ ಭಗವಂತನು ಸದಾ ಶಾಂತಿಯನ್ನು ನೀಡಲಿ ಎಂದು ಪುತ್ತೂರು ವಂದನೀಯ ಧರ್ಮ ಗುರುಗಳು ಹಾರೈಸಿದರು.
ವೇದಿಕೆಯಲ್ಲಿ ಮುಖಂಡರುಗಳಾದ ಮಂಜುನಾಥ ಭಂಡಾರಿ, ಇಬ್ರಾಹಿಂ, ಜೆ ಆರ್ ಲೋಬೊ, ಅಭಯ್ ಚಂದ್ರ ಜೈನ್, ಯುವ ಮುಖಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಶಕುಂತಲಾ ಶೆಟ್ಟಿ, ಲಾವಣ್ಯ ಬಂಟ್ವಾಳ, ಶಾಲೆಟ್ ಪಿಂಟೋ, ಹಾಲಿ ಹಾಗೂ ಮಾಜಿ ನಗರ ಮತ್ತು ತಾಲೂಕು ಕಾಂಗ್ರೆಸ್ ಪದಾಧಿಕಾರಿಗಳು, ಸದಸ್ಯರುಗಳು ಬೃಹತ್ ಸಂಖ್ಯೆಯಲ್ಲಿ ಹಾಜರಿದ್ದರು.
.

