ಸೆ.27 ಕ್ಕೆ ಉಚಿತ ಗಣಪತಿ ಚಿತ್ರ ಬರೆಯುವ ಸ್ಪರ್ಧೆಗೆ ಆಹ್ವಾನ

0
22

ದಾವಣಗೆರೆ : ದಾವಣಗೆರೆಯ ಕೆ.ಟಿ.ಜೆ. ನಗರ ಶ್ರೀ ಗಜಾನನ ಯುವಕ ಸಂಘ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 49ನೇ ವರ್ಷದ ಶ್ರೀ ಗಣೇಶ ಮಹೋತ್ಸವ ಪ್ರಯುಕ್ತ ದಾವಣಗೆರೆಯ ಕೆ.ಟಿ.ಜೆ. ನಗರದ 2ನೇ ತಿರುವು, ಶಿವಪ್ಪಯ್ಯ ವೃತ್ತದ ಹತ್ತಿರವಿರುವ ಶ್ರೀ ಮಹಾಗಣಪತಿ, ಶ್ರೀ ಶನೈಶ್ಚರ, ಶ್ರೀ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಸೆಪ್ಟೆಂಬರ್ 27 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಗಣೇಶನ ಚಿತ್ರ ಬರೆಯುವ ಉಚಿತ ಸ್ಪರ್ಧೆಗೆ ಅಹ್ವಾನಿಸಲಾಗಿದೆ ಎಂದು ಶ್ರೀ ಗಜಾನನ ಯುವಕ ಸಂಘದ ಅಧ್ಯಕ್ಷರಾದ ವಿರೂಪಾಕ್ಷಪ್ಪನವರು ತಿಳಿಸಿದ್ದಾರೆ.

ಈ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಕಲಾವಿದರು, ಹಿರಿಯರು, ಕಿರಿಯರು, ಮಕ್ಕಳು ಯಾರಾದರೂ ಭಾಗವಹಿಸಬಹುದು, ಚಿತ್ರ ಬರೆಯುವ ಸ್ಪರ್ಧೆಗೆ ಡ್ರಾಯಿಂಗ್ ಶೀಟ್ ಉಚಿತವಾಗಿ ವಿತರಿಸುತ್ತೇವೆ ಇನ್ನುಳಿದ ಪರಿಕರಗಳನ್ನು ಕಲಾವಿದರು ತರಬೇಕಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಬಹುಮಾನ ವಿಜೇತರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ವಿತರಿಸುತ್ತೇವೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ. ಮೊ. 9538732777, 9945785170