ಫುಟ್ಬಾಲ್‌ನಲ್ಲಿ ವಿವೇಕಾನಂದ ಪಿಯು ಕಾಲೇಜಿನ ಬಾಲಕರ ತಂಡಕ್ಕೆ ದ್ವಿತೀಯ ಸ್ಥಾನ

0
27

ವಿವೇಕಾನಂದ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಧ್ಯಾನೇಶ್ ಎಸ್., ರಿಥನ್ ಗೌಡ ಎಸ್.ಪಿ., ಶ್ರೀಶಾಂತ್, ಮೋಹಿತ್ ಬಿ.ಕೆ., ಭುವನ್ ಗೌಡ ಜಿ.ಎನ್., ಡಿ.ವಿ. ದೈವಿಕ್ ದರ್ಶನ್, ಪವನ್ ಕುಮಾರ್ ಟಿ., ಲೋಕೇಶ್ ಕೆ.ಜಿ. ಹಾಗೂ ತಸ್ಮೈ ಪಿ. ಗೌಡ ಭಾಗವಹಿಸಿದ್ದರು.

ದ್ವಿತೀಯ ಪಿಯುಸಿಯ ನಿಹಾನ್ ಶೆಟ್ಟಿ ವಿ.ಆರ್., ಉಜ್ವಲ್ ಮನೋಜ್ ತಾರಾ, ಚಿರಾಗ್ ಜಿ.ಯು., ಪವನ್ ವಿ.ವಿ., ಬಿ.ಜಿ. ವಿಲಾಸ್, ಗಗನ್ ಸಿ.ಎನ್. ಹಾಗೂ ಶ್ರೀಶಾಂತ್ ಎಸ್. ತಂಡದ ಪರವಾಗಿ ಆಡಿದ್ದರು.

ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ, ಡಾ. ಜ್ಯೋತಿ ಹಾಗೂ ಯತೀಶ್ ಅವರ ಸಹಕಾರದೊಂದಿಗೆ ತರಬೇತಿ ನೀಡಲಾಗಿತ್ತು.

ತಾಲೂಕು ಮಟ್ಟದ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದ ತಂಡದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.