ಉಡುಪಿ ವಿಶ್ವಭಾರತಿ ಸೊಸೈಟಿ : ದಶಮಾನೋತ್ಸವ ಸಾಧಕರಿಗೆ ಸನ್ಮಾನ

0
7

ಉಡುಪಿ : ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ, ಉಡುಪಿ ಇದರ ದಶಮಾನೋತ್ಸವ ಹಾಗೂ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ವಳಕಾಡು ಪದ್ಮಾವತಿ ಸಭಾಸದನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ನಿರ್ದೇಶಕ ಮಂಜುನಾಥ ಎಸ್.ಕೆ. ಅವರು ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘವು ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದನ್ನು ಶ್ಲಾಘಿಸಿದ ಅವರು, ಸಂಘದ ವ್ಯವಹಾರದಲ್ಲಿ ಆಗಿರುವ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದೆಯೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ದಶಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತೀಕ್ ಕಾಮತ್, ನಿತ್ಯಾನಂದ ವಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ವೀಣಾ ಮುರಳೀಧರ ಸಾಮಗ, ಕೆ. ಗಣಪತಿ ನಾಯಕ್, ಕುಂಜಿಬೆಟ್ಟು ನಾರಾಯಣ ಕಾಮತ್, ಅಜಿತ್ ಕುಮಾರ್, ಸುಭಾಸ್ ಕೊರಂಗ್ರಪಾಡಿ, ಡಾ. ಕೆ. ಉಷಾ ಎಸ್. ಪೈ ಹಾಗೂ ಕೆ. ಗಣೇಶ್ ಪೈ ಅವರನ್ನು ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ, ಮಾಜಿ ನಿರ್ದೇಶಕರು, ಹಳೆಯ ಸಿಬ್ಬಂದಿ, ಪ್ಯಾನೆಲ್ ವಕೀಲರು, ಆಸ್ತಿ ಮೌಲ್ಯಮಾಪಕರು ಹಾಗೂ ಪಿಗ್ಮಿ ಸಂಗ್ರಾಹಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾದ ಮಂಜುನಾಥ ಎಸ್.ಕೆ. ಅವರನ್ನು ಸಹ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ ಅಂಪಾರು, ಲೆಕ್ಕಪರಿಶೋಧಕ ಕೆ. ಗಣೇಶ್ ಎಂ. ಕಾಮತ್, ಮುದ್ರಕರ ಸೌಹಾರ್ದ ಸಹಕಾರಿ ಸಂಘ ಉಡುಪಿಯ ಅಧ್ಯಕ್ಷ ಬಿ.ಜಿ. ಸುಬ್ಬರಾವ್ ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಜಿ. ಸಾಲಿಯಾನ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್. ಮಹೇಶ್ ಶೆಣೈ ಮಾತನಾಡಿ, ವರದಿ ವರ್ಷದ ಅಂತ್ಯಕ್ಕೆ ಸಂಘವು ₹9.11 ಕೋಟಿ ದುಡಿಯುವ ಬಂಡವಾಳ, ₹6.65 ಕೋಟಿ ಹೊರಬಾಕಿ ಸಾಲ ಹಾಗೂ ₹15.22 ಕೋಟಿ ವ್ಯವಹಾರ ನಡೆಸಿದೆ. ವರದಿ ವರ್ಷದಲ್ಲಿ ₹1.08 ಕೋಟಿ ಆದಾಯ ಗಳಿಸಿದ್ದು, ₹19,68,397.68 ನಿವ್ವಳ ಲಾಭ ಗಳಿಸಿದೆ. ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಇದು ಅತ್ಯಧಿಕ ಲಾಭವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಠ, ಪಾರದರ್ಶಕ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಸಂಸ್ಥೆಯನ್ನಾಗಿ ರೂಪಿಸಿ, ಸದಸ್ಯರಿಗೆ ವೇಗವಾದ ಹಾಗೂ ಉತ್ತಮ ಸೇವೆ ನೀಡುವ ಉದ್ದೇಶ ಹೊಂದಲಾಗಿದೆ. ಸಂಘದ ಆರ್ಥಿಕ ಶಿಸ್ತು ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.

ನಿರ್ದೇಶಕ ರವಿನಾಥ ಪೈ ಮಾತನಾಡಿ, ಸಂಘದ ಆರಂಭಿಕ ದಿನಗಳಿಂದ ಹತ್ತು ವರ್ಷಗಳ ಪಯಣದ ಏಳುಬೀಳುಗಳನ್ನು ಮೆಲುಕು ಹಾಕಿ, ಮುಂದಿನ ಕಾರ್ಯಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು. ಅಧ್ಯಕ್ಷ ಎಚ್. ಮಹೇಶ್ ಶೆಣೈ, ಉಪಾಧ್ಯಕ್ಷ ಎಂ. ಸದಾಶಿವ ರಾವ್ ಹಾಗೂ ನಿರ್ದೇಶಕ ರವಿನಾಥ ಪೈ ಅವರನ್ನು ಅಭಿನಂದಿಸಲಾಯಿತು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಅವರು ಸೌಹಾರ್ದ ಸಹಕಾರಿಯಲ್ಲಿ ಸದಸ್ಯರ ಜವಾಬ್ದಾರಿ, ಹಕ್ಕು ಮತ್ತು ಕರ್ತವ್ಯಗಳು ಹಾಗೂ ಸಹಕಾರಿ ಸಂಘದ ಬೆಳವಣಿಗೆ ಕುರಿತು ಉಪನ್ಯಾಸ ನೀಡಿದರು. ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಬಳಿಕ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ವರದಿ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ.9ರಷ್ಟು ಡಿವಿಡೆಂಡ್ ಘೋಷಿಸಲಾಯಿತು.

ನಿರ್ದೇಶಕ ಪಿ. ಶ್ಯಾಮ್‌ಪ್ರಸಾದ್ ಕುಡ್ವ ಮಾತನಾಡಿ, ಸಂಘದ ಬೆಳವಣಿಗೆಗೆ ಕಾರಣಕರ್ತರಾದ ಸಮಾಜದ ಎಲ್ಲ ವರ್ಗದವರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿಯೂ ಸಂಘವನ್ನು ಸದೃಢವಾಗಿ ಬೆಳೆಸಲು ಸರ್ವರ ಸಹಕಾರ ಕೋರಿದರು.

ಉಪಾಧ್ಯಕ್ಷ ಎಂ. ಸದಾಶಿವ ರಾವ್, ನಿರ್ದೇಶಕರಾದ ಉಮೇಶ್ ಜೋಗಿ, ಹೆಚ್. ಸುರೇಶ್ ಶೆಣೈ, ಎಂ. ಗಣೇಶ್ ಪೈ, ಅನಂತಕೃಷ್ಣ ಪ್ರಭು, ಪಿ. ಶ್ಯಾಮ್‌ಪ್ರಸಾದ್ ಕುಡ್ವ, ರೊನಾಲ್ಡ್ ಬ್ರೆಯಾನ್ ಬರ್ನಾರ್ಡ್, ಸೀಮಾ ಹೆಚ್. ಶೆಣೈ, ರಾಘು ಹಾಗೂ ವೃತ್ತಿಪರ ನಿರ್ದೇಶಕರಾದ ಆನಂದ ಕೆ. ಪೂಜಾರಿ, ಸುಮತಿ ಪಿ. ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

ನಿರ್ದೇಶಕ ಮಾರುತಿ ಎನ್. ಪ್ರಭು ದಶಮಾನೋತ್ಸವ ಕಾರ್ಯಕ್ರಮವನ್ನು ಹಾಗೂ ರಾಮಚಂದ್ರ ಶೆಣೈ ವಾರ್ಷಿಕ ಸಾಮಾನ್ಯ ಸಭೆಯನ್ನು ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಿರಣ ಉಳಿತ್ತಾಯ ವಂದಿಸಿದರು.