ವಿವಿಧ ವಿಪ್ರ ಸಂಘಟನೆಗಳೊಂದಿಗೆ ಸಂವಾದ; ಸನಾತನ ಧರ್ಮದ ಉಳಿವಿನ ಕುರಿತು ಸಮಾಲೋಚನೆ
ಮಂಗಳೂರು, ಅ.1: ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಅಸೋಸಿಯೇಶನ್ ವತಿಯಿಂದ ‘ವಿಶ್ವಗುರು ಅವಾರ್ಡ್’ ಪುರಸ್ಕೃತ ರಾಜರ್ಷಿ ಡಾ. ಬಿ.ಕೆ. ಮೋದಿ ಅವರಿಗೆ ಗೌರವದ ಅಭಿನಂದನಾ ಕಾರ್ಯಕ್ರಮವನ್ನು ಅ.2ರಂದು ಆಯೋಜಿಸಲಾಗಿದೆ.
ಅ.2ರಂದು ಶುಕ್ರವಾರ ಬೆಳಿಗ್ಗೆ 9.30ಕ್ಕೆ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದ **‘ಭೂವರಾಹ ಸಭಾಂಗಣ’**ದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವೂ ನಡೆಯಲಿದ್ದು, ಸನಾತನ ಧರ್ಮದ ಉಳಿವು ಹಾಗೂ ಮುಂದಿನ ಪೀಳಿಗೆಗೆ ಅದರ ಮೌಲ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ವಿವಿಧ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಾಗುವುದು.
ವಿಪ್ರ ಸಮುದಾಯದ ಸಂಘಟನೆಗಳ ನಡುವೆ ಸಮನ್ವಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಲವರ್ಧನೆ ಸೇರಿದಂತೆ ಹಲವು ವಿಚಾರಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ ಎಂದು ಹಿರಿಯರಾದ ಡಾ. ಎಂ. ಬಿ. ಪುರಾಣಿಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
