
ಬಹ್ರೈನ್ : ಜಿಎಸ್‌ಎಸ್ ಬಹ್ರೈನ್ ಬಿಲ್ಲವಾಸ್ ತಂಡವು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ತಂಡದ ಈ ಭರ್ಜರಿ ಗೆಲುವಿಗೆ ಆಟಗಾರರು, ನಾಯಕರು, ಬೆಂಬಲಿಗರು ಹಾಗೂ ಪಂದ್ಯಾವಳಿಯುದ್ದಕ್ಕೂ ತಂಡದ ಬೆನ್ನಿಗೆ ನಿಂತ ಪ್ರತಿಯೊಬ್ಬರಿಗೂ ಜಿಎಸ್‌ಎಸ್ ಬಹ್ರೈನ್ ಬಿಲ್ಲವಾಸ್ ಕಾರ್ಯಕಾರಿ ಸಮಿತಿ ಅಭಿನಂದನೆಗಳನ್ನು ಸಲ್ಲಿಸಿದೆ.

ತಂಡದ ಒಗ್ಗಟ್ಟು, ಪರಿಶ್ರಮ ಮತ್ತು ಕ್ರೀಡಾಸ್ಫೂರ್ತಿಗೆ ಈ ಗೆಲುವು ಸಾಕ್ಷಿಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

“ಈ ಸಲ ಕಪ್ ನಮ್ಮದು!” ಎಂಬ ಘೋಷಣೆಯೊಂದಿಗೆ ತಂಡದ ಗೆಲುವನ್ನು ಸಂಭ್ರಮಿಸಲಾಯಿತು.
ಜಿಎಸ್‌ಎಸ್ ಬಹ್ರೈನ್ ಬಿಲ್ಲವಾಸ್ ಕಾರ್ಯಕಾರಿ ಸಮಿತಿ (2026–2027)
