ವಿಟ್ಲ : ವಿಟ್ಲ ಕಸಬಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸುರಿದ ಗಾಳಿ ಸಹಿತ ಮಳೆಯಿಂದಾಗಿ ಮೂರು ಮನೆಗಳ ಮೇಲೆ ಮರಗಳು ಬಿದ್ದು ಭಾಗಶಃ ಹಾನಿಗೊಳಗಾದ ಘಟನೆಗಳು ವರದಿಯಾಗಿವೆ.
ವಿಟ್ಲ ಕಸಬಾದ ಅಪ್ಪೇರಿ ಪಾದೆ ನಿವಾಸಿ ಜಯಂತಿ ಮತ್ತು ವಿಜಯ ಭಂಡಾರಿ ಅವರ ಮನೆಯ ಮೇಲೆ ಮರ ಬಿದ್ದು ಮನೆಯ ಒಂದು ಭಾಗ ಹಾನಿಗೊಂಡಿದೆ. ಇದೇ ವೇಳೆ ಪುಣಚ ಗ್ರಾಮದ ಅಜೇರು ಎಂಬಲ್ಲಿ ಪ್ರಭಾಕರ ಪ್ರಭು ಅವರ ಮನೆಯ ಮೇಲೆಯೂ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಇನ್ನು ವಿಟ್ಲ ಮುನ್ನೂರು ಗ್ರಾಮದ ಕೇಪುಳಗುಡ್ಡೆ ಎಂಬಲ್ಲಿ ಸುಂದರಿ ಅವರ ಮನೆಯ ಮೇಲೆಯೂ ಮರ ಬಿದ್ದು ಮನೆಯ ಭಾಗಶಃ ಹಾನಿಯಾಗಿದೆ.

