ಬ್ರಹ್ಮಾವರ : ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದ ಅನಿತಾ ಬಾಬು ಪೂಜಾರಿ ಇವರ ಮುಂದಾಳತ್ವದಲ್ಲಿ ಬ್ರಹ್ಮಾವರ ಸಮುದಾಯ ಆರೋಗ್ಯಕ್ಕೆ ಭೇಟಿನೀಡಿ ಹಲವಾರು ತಿಂಗಳಿಂದ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಗಳು ಏನು.ಅದಕ್ಕೆ ಕಾರಣಗಳು ಏನು ಎಂದು ತಿಳಿಯಲು ಮಹಿಳಾ ಕಾಂಗ್ರೆಸ್ಸಿನ ಸದಸ್ಯರು ಹಾಗೂ ಬ್ಲಾಕ್ ನ ಉಪಾಧ್ಯಕ್ಷರಾದ ಕುಮಾರ ರ್ಸುವರ್ಣ.
ಸೇವಾದಳದ ಅಧ್ಯಕ್ಷರಾದ ಉಮೇಶ ಪೂಜಾರಿ ಇವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಾದ ದೀಕ್ಷಿತಾ ದಂತ ವೈದ್ಯರಾದ ಪ್ರದೀಪ್ ಪೂಜಾರಿ ಹಾಗೂ ಹಾಗೂ ಸಿಬಂದ್ದಿ ವರ್ಗದವರ ಸಮ್ಮುಖದಲ್ಲಿ .ಸಮಸ್ಯೆಗಳಿಗೆ ಕಾರಣ ಏನು .ಯಾವಾ ರೀತಿಯ ಪರಿಹಾರ ಆಗಬೇಕು ಏನೆಲ್ಲಾ ತೊಂದರೆ ಇದೆ ಎನ್ನುವುದನ್ನು ನೇರವಾಗಿ ಚರ್ಚೆ ಮಾಡಲಾಯಿತು.
ಮುಂದೆ ಏನು ಪರಿಹಾರ ಅನ್ನುವ ಬಗ್ಗೆ ಸಲಹೆಗಳನ್ನು ಪಡೆಯಲಾಯಿತು.ಈ ಎಲ್ಲಾ ಸಮಸ್ಯೆಗಳನ್ನು ಆರೋಗ್ಯ ಸಚಿವರಾದ ಯು.ಟಿ ಖಾದರ್ ಅವರ ಗಮನಕ್ಕೆ ತರುವುದು ಅಂತ ನಿರ್ಣಯ ಮಾಡಲಾಯಿತು..ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಸಕರಾತ್ಮಕವಾಗಿ ಸಹಕರಿಸಿದರು ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಸರೋಜಾ ನಾಯರಿ.ಹಾಗೂ ಕುಸುಮಾ.ಮಾಜಿ ಸದಸ್ಯರಾದ ವಿನುತಾ. ಲವೀನಾ ಲುವಿಸ್.ಶಾಂತಿ ಹಂದಾಡಿ.ಇವರೆಲ್ಲರೂ ಉಪಸ್ಥಿತರಿದ್ದರು.

