ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆಯವರಿಗೆ ಶ್ರದ್ಧಾಂಜಲಿ

0
56

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಚೆನ್ನೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿದ್ದ, ಹಿರಿಯ ಸಾಹಿತಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ‘ಸರೋಜಿನಿ’ ಬಾರೆಬೈಲ್ ಮಂಗಳೂರು ಇಲ್ಲಿ ಸಂಜೆ 5.00 ಫಂಟೆಗೆ ಶ್ರೀ ಮಂಜುನಾಥ ಎಸ್. ರೇವಣ್ಕರ್, ಅಧ್ಯಕ್ಷರು, ಕ.ಸಾ.ಪ. ಮಂಗಳೂರು ತಾಲೂಕು ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಡಾ.ಮುರಲೀ ಮೋಹನ್ ಮತ್ತು ಗಣೇಶ್ ಪ್ರಸಾದ್ ಜೀ , ಗೌರವ ಕಾರ್ಯದರ್ಶಿಗಳು, ಸುಬ್ರಾಯ ಭಟ್ ಕೋಶಾಧಿಕಾರಿ ಮತ್ತು ಸರ್ವ ಸದಸ್ಯರು ಕ.ಸಾ.ಪ. ಮಂಗಳೂರು ತಾಲೂಕು ಉಪಸ್ಥಿತರಿದ್ದರು. ಅನಂತ ಶರ್ಮ ಅವರು ಶ್ರೀಕೃಷ್ಣ ಭಟ್ಟರು ತಮಿಳುನಾಡಿನಲ್ಲಿ ಸಲ್ಲಿಸಿದ ಕನ್ನಡ ಸೇವೆ , ಅವರ ಕೃತಿಗಳು , ಸಂಶೋಧನೆ , ಹಲವು ಭಾಷೆಗಳ ಪಾಂಡಿತ್ಯ , ಅನುವಾದ , ಇವುಗಳ ಬಗ್ಗೆ ತಿಳಿಸಿದರಲ್ಲದೆ ಎಲ್ಲದಕ್ಕೂ ಮಿಗಿಲಾಗಿ ಅವರ ಮಾನವೀಯ ಅಂತ:ಕರಣ ಮತ್ತು ಎಲ್ಲರನ್ನೂ ಪ್ರೀತಿಸಿದ ಆದರ್ಶಗಳನ್ನು ಜ್ಞಾಪಿಸಿಕೊಳ್ಳುತ್ತಾ ನುಡಿ ನಮನ ಸಲ್ಲಿಸಿದರು. ಸುಬ್ರಮಣ್ಯ ಭಟ್ ಅರ್ತಿಕಜೆ ಅವರು ಶ್ರೀಕೃಷ್ಣ ಭಟ್ ಅರ್ತಿಕಜೆ ಯವರ ಕನ್ನಡ ಸೇವೆಯನ್ನು ಸ್ಮರಿಸಿದರು ಮತ್ತು ನುಡಿ ನಮನ ಸಲ್ಲಿಸಿದ ಪರಿಷತ್ತಿಗೆ ಅರ್ತಿಕಜೆ ಕುಟುಂಬದ ಪರವಾಗಿ ವಂದನೆಗಳನ್ನು ತಿಳಿಸಿದರು.

ಬಾರೆಬೈಲ್ ಬಡಾವಣೆಯ ರವೀಂದ್ರನಾಥ್ ಪಿ. ಯಸ್, ಶ್ರೀಕೃಷ್ಣ ಭಟ್,ಕಸಾಪದ ರವೀಂದ್ರನಾಥ್, ಸನತ್ ಕುಮಾರ್ ಜೈನ್,ಡಾ ರಾಜಶ್ರೀ ಮೋಹನ್ ಈ ಸಂದರ್ಭದಲ್ಲಿ ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.