ಒಳ್ಳೆಯ, ಉತ್ತಮ ಕಾರ್ಯ ಮಾಡುವವರನ್ನು ಅಭಿಮಾನಿಗಳು ಗುರುತಿಸಿ ಗೌರವಿಸುತ್ತಿದ್ದಾರೆ-ಮಿಥುನ್ ರೈ

0
6

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೂಡುಬಿದಿರೆ ಅಭಿಮಾನಿಗಳ ಬಳಗ ಅಂಗನವಾಡಿ, ಆಶಾ ಕಾರ್ಯಕರ್ತರುಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪ್ರೀತಮ್ ಗಾರ್ಡನ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರುಗಳಿಗೆ ಸಂಗೀತ, ಸಮೂಹ ನೃತ್ಯ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಿಥುನ್ ರೈ ಮಾತನಾಡಿ ಸಮಾಜಕ್ಕೆ ಉತ್ತಮ ಕೆಲಸವನ್ನು ಮಾಡುತ್ತಿರುವ ಕಾರ್ಯಕರ್ತರುಗಳನ್ನು ಅಭಿವಂದಿಸುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದರು. ಸಿ ಡಿ ಪಿ ಯು ಅಧಿಕಾರಿ ಶೈಲಜಾ ಮಾತನಾಡಿ ಅಂಗನವಾಡಿಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರ ಗಳನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದರು. ಸದಾ ಕೆಲಸ ಮಾಡುತ್ತಿರುವ ನಮ್ಮಂತಹ ಕಾರ್ಯಕರ್ತರಿಗೆ ಸಹಕಾರ ಸರಿಯಾದ ಗೌರವ ಧನವನ್ನು ನೀಡುತ್ತಿಲ್ಲ ಎಂಬ ಕೊರಗನ್ನು ಕಾರ್ಯಕರ್ತರು ಹೇಳಿಕೊಂಡರು.

ದ ಕ ಜಿಲ್ಲಾ ಧಾರ್ಮಿಕ ಪರಿಷತ್ ನ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ನೋವು ಸಹಿಸಿ ವಾತ್ಸಲ್ಯ ತೋರುವ ತಾಯಿ ತಾಳ್ಮೆಯ ಸಾಕಾರ ಮೂರ್ತಿ. ಬೇಸರ ಅಸಹ್ಯ ಪಡೆದೆ ಮಕ್ಕಳನ್ನು ಆದರಿಸುವ ಅಂಗನವಾಡಿ ಕಾರ್ಯಕರ್ತೆಯರ ಋಣ ಮಕ್ಕಳು ತೀರಿಸಲು ಅಸಾಧ್ಯ. ಮಕ್ಕಳ ಶಕ್ತಿಯನ್ನು ತಡೆಯುವ ಬದಲು ಉತ್ತಮ ಆರೋಗ್ಯಕರ ವಿಚಾರಗಳತ್ತ ತಿರುಗಿಸಿ. ಸಿದ್ಧಾಂತಕ್ಕೆ ಬದಲು ಧರ್ಮಕಾರ್ಯ ಮತ್ತು ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಿ. ಆಹಾರ ತಯಾರಿಸುವಾಗಲು ಬಯ್ಯದೆ, ನಿಂದಿಸದೆ, ಪ್ರೀತಿ ವಾತ್ಸಲ್ಯದಿಂದ ತಯಾರಿಸಿ, ಬಡಿಸಿ, ಒಲವಿನಿಂದ ಉಣಿಸಿದರೆ ಮಕ್ಕಳೂ ಅನ್ಯೋನ್ಯತೆಯಿಂದ ಬೆಳೆಯುತ್ತಾರೆ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ವಲಯ ವಾರು ಕಾರ್ಯಕರ್ತರುಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್, ಕಂಬಳ ಸಮಿತಿಯ ಚಂದ್ರಹಾಸ ಸನಿಲ್, ಗ್ಯಾರೆಂಟಿ ಸಮಿತಿಯ ಅರುಣ್ ಕುಮಾರ್ ಶೆಟ್ಟಿ, ಮೂಡಾದ ಹರ್ಷವರ್ಧನ್ ಪಡಿವಾಳ್,ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಕಾರ್ಯದರ್ಶಿ ಪುರಂದರ ದೇವಾಡಿಗ, ಸುಪ್ರಿಯಾ ಶೆಟ್ಟಿ, ಶೋಭಾ, ಅನೀಶ್, ಪಿಕೆ ಥೋಮಸ್,ಜೋಸ್ಸಿ ಮಿನೇಜಸ್, ಕುಮಾರ್ ಪೂಜಾರಿ, ಹಾಜರಿದ್ದರು. ಕನ್ನಡ ಸಮಿತಿಯ ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರ್ವಹಿಸಿದರು.