ಶಾಮಲಾ ನಾಯಕ್ ಶ್ರದ್ದಾಂಜಲಿ ಸಭೆ

0
39

ಮೂಡುಬಿದಿರೆ :- ಇತ್ತೀಚಿಗೆ ನಿಧನರಾದ ಸಮಾಜ ಸೇವಕಿ ಶ್ರೀಮತಿ ಶ್ಯಾಮಲಾ ನಾಯಕ್ ಬಾರ್ದಿಲ ರವರ ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಸಮಾಜ ಮಂದಿರದಲ್ಲಿ ನಡೆಯಿತು.

ಜ್ಯೋತಿಷ್ಯ ವಿದ್ವಾನ್ ಮತ್ತು ಪುರೋಹಿತ ರತ್ನಾಕರ ಭಟ್ ಸರಪಾಡಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮೃತರು ಸಮಾಜದಲ್ಲಿ ಜನಾನುರಾಗಿಯಾಗಿದ್ದು ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ, ಸಂಘ ಸಂಸ್ಥೆ ಮತ್ತು ಇನ್ನಿತರ ಮೂಲಗಳಿಂದ ವಿದ್ಯಾರ್ಥಿ ವೇತನ ದೊರಕಿಸಿ ಕೊಟ್ಟು ಅವರ ಶಿಕ್ಷಣ ಮುಂದುವರಿಸುವಲ್ಲಿ ಕಾರಣಿಭೂತರಾಗಿ ತನ್ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಿದರು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಂಘ ದ ಅಧ್ಯಕ್ಷರಾದ ದರ್ಬೆ ಪ್ರವೀಣ್ ನಾಯಕ್,ಪದಾಧಿಕಾರಿ ದಯಾನಂದ ನಾಯಕ್ ಪೂಂಜಾಲಕಟ್ಟೆ, ಮಂಗಳೂರು, ಆದರ್ಶ (ರಿ ) ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗಿಸ್,ಪೂರ್ಣಾನಂದ ಸೌಹಾರ್ದ ಸಹಕಾರೀ ಸಂಘದ ಅಧ್ಯಕ್ಷರಾದ ಗಣೇಶ್ ಶೆಣೈ, ಪುತ್ತಿಲ ಪರಿವಾರ ಟ್ರಸ್ಟ್ ನ ಅಧ್ಯಕ್ಷ ಪಾತಾಲ ರಾಮ ಭಟ್, ಚಂದ್ರಹಾಸ ಭಟ್ ಪಂಜ ಪ್ರಭಾಕರ ಭಟ್ ಇರುವೈಲು,ಪ್ರಭಾಕರ ಪ್ರಭು ಕರ್ಪೆ,ಗಣೇಶ್ ನಾಯಕ್ ಬೋಳoಗಡಿ, ಜಗದೀಶ್ ಕುಲಾಲ್, ಗಜಾನನ ಕನ್ಸ್ಟ್ರಕ್ಷನ್ ಕುಪ್ಪೆಪದವು ಪತ್ರಕರ್ತ ಪದ್ಮನಾಭ ಬಾರ್ದಿಲ,ಪ್ರವೀಣ್ ಶೆಣೈ,ಕಟ್ಟಣಿಗೆ ಕೃಷ್ಣ ಪ್ರಭು,ಮೃತರ ಪತಿ ಗಣೇಶ್ ನಾಯಕ್ ಬಾರ್ದಿಲ, ಪುತ್ರ ಅಭಿಜಿತ್ ನಾಯಕ್, ಕುಟುಂಬಸ್ಥರು, ಹಿತೈಷಿಗಳು ಭಾಗವಹಿಸಿದ್ದರು.