ಕಾಸರಗೋಡು ಪಾಂಗೋಡು ಕ್ಷೇತ್ರದಲ್ಲಿ “ಅಬ್ಬರದ ಕನ್ನಡ ಸಂಸ್ಕೃತಿ ಬಿಂಬಿಸುವ ನವರಾತ್ರಿ ಮಹೋತ್ಸವ “

0
10

ಕಾಸರಗೋಡು : ಪಾಂಗೋಡು ದುರ್ಗಾನಗರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ–ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ನವರಾತ್ರಿ ಮಹೋತ್ಸವ ಅ.11ರಿಂದ 20ರವರೆಗೆ ವಿವಿಧ ಧಾರ್ಮಿಕ, ಭಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವದಿಂದ ನಡೆಯಲಿದೆ.

ಶೃಂಗೇರಿ ಶಾರದಾ ಪೀಠದ ಶ್ರೀ ಜಗದ್ಗುರುಗಳ ಆಶೀರ್ವಾದದೊಂದಿಗೆ, ಮಂಗಳೂರು ಮರಕಡ ಶ್ರೀ ಗುರುಪರಾಶಕ್ತಿ ಮಠದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಗಳ ಹಾಗೂ ಪೂಜನೀಯ ಮಾತೆ ಶಕುಂತಲ ಅಮ್ಮನವರ ಪೂರ್ಣಾನುಗ್ರಹದಲ್ಲಿ, ಪ್ರಸ್ತುತ ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿಯವರ ಅನುಗ್ರಹದೊಂದಿಗೆ ಹಾಗೂ ಹಾರ್ನಾಡು ಶ್ರೀ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನವರಾತ್ರಿ ಮಹೋತ್ಸವ ನಡೆಯಲಿದೆ.

ಅ.11ರಂದು ಮಹೋತ್ಸವಕ್ಕೆ ಚಾಲನೆ

ಅ.11ರಂದು ಬೆಳಗ್ಗೆ 7ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಣಹೋಮ ನಡೆಯಲಿದೆ. ಬೆಳಗ್ಗೆ 8ಕ್ಕೆ ಎರಡು ಚಂಡಿಕಾಹೋಮಗಳು ನಡೆಯಲಿದ್ದು, ಡಾ. ಮಂಜುಳ ಎ. ರಾವ್, ಕಲ್ಪನೆ, ಕುಲಶೇಖರ ಹಾಗೂ ಮನೋಜ್ ಕುಮಾರ್, ಸೌಹಾರ್ದ ಲೇನ್, ಬಿಕರ್ನಕಟ್ಟೆ, ಮಂಗಳೂರು ಅವರು ಸೇವೆ ಸಲ್ಲಿಸಲಿದ್ದಾರೆ.

ಬೆಳಗ್ಗೆ 11ಕ್ಕೆ ಕಾಸರಗೋಡಿನ ವಿಶ್ವಕರ್ಮ ಭಜನಾ ಸಂಘದವರಿಂದ ಭಜನೆ ಹಾಗೂ ಮಧ್ಯಾಹ್ನ 12ಕ್ಕೆ ಕೊರಕೋಡು ಶ್ರೀ ದುರ್ಗಾಪರಮೇಶ್ವರಿ–ಸುಬ್ರಹ್ಮಣ್ಯ ಮಹಿಳಾ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣವೂ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಮಹಾತಾಯಿಯ ದರ್ಶನ ಸೇವೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ಮಡಪುರ ಮುತ್ತಪ್ಪ ಭಜನಾ ಸಂಘದವರಿಂದ ಭಜನೆ ಹಾಗೂ ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.

ಅ.12ರಿಂದ ಧಾರ್ಮಿಕ ಕಾರ್ಯಕ್ರಮಗಳ ಸರಣಿ

ಅ.12ರಂದು ಮಧ್ಯಾಹ್ನ 12ಕ್ಕೆ ಜೆಪ್ಪು–ಮೋರ್ಗನ್ಸ್ ಗೇಟ್‌ನ ರಾಮಕ್ಷತ್ರಿಯ ಸಂಕೀರ್ತನ ತಂಡದಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಅಯ್ಯಪ್ಪ ನಗರದ ಶ್ರೀ ಅಯ್ಯಪ್ಪ ಭಜನಾ ಸಂಘದವರಿಂದ ಭಜನೆ ಮತ್ತು ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.

ಅ.13ರಂದು ಮಧ್ಯಾಹ್ನ 12ಕ್ಕೆ ವಿಷ್ಣುಮಂಗಳ, ಕೂಡ್ಲುವಿನ ಶ್ರೀ ವೀಣಾ ಪ್ರಸನ್ನಾ ಮತ್ತು ತಂಡದಿಂದ ಭಜನೆ ನಡೆಯಲಿದ್ದು, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ಕಾವುಗೋಳಿಯ ಶ್ರೀ ಮಹಾವಿಷ್ಣು ಭಜನಾ ಸಂಘದಿಂದ ಭಜನೆ ಹಾಗೂ ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.

ಅ.14ರಂದು ಬೆಳಗ್ಗೆ 11ಕ್ಕೆ ಮೀಪುಗುರಿಯ ಶ್ರೀ ಹರಿ ಮಹಿಳಾ ಭಜನಾ ಸಂಘ ಹಾಗೂ ಮಧ್ಯಾಹ್ನ 12ಕ್ಕೆ ಉಳ್ಳಾಲ ವಲಯದ ಸದ್ಗುರು ರಾಮಕ್ಷತ್ರಿಯ ಭಜನಾ ಸಂಘದಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ರಾತ್ರಿ 7ಕ್ಕೆ ವಿಷ್ಣುಮಂಗಳ, ಕೂಡ್ಲುವಿನ ಶ್ರೀ ಮಹಾವಿಷ್ಣು ಭಜನಾ ಸಂಘದಿಂದ ಭಜನೆ ಹಾಗೂ ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.

ಅ.15ರಂದು ಮಧ್ಯಾಹ್ನ 12ಕ್ಕೆ ಅಣಂಗೂರು, ಕಾಸರಗೋಡಿನ ಶ್ರೀ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ವೃಂದದಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಕೂಡ್ಲುವಿನ ಶ್ರೀ ಅಯ್ಯಪ್ಪ ಭಜನಾ ಸಂಘದಿಂದ ಭಜನೆ ಹಾಗೂ ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.

ಅ.16ರಂದು ಮಧ್ಯಾಹ್ನ 12ಕ್ಕೆ ಮುಲ್ಕಿ–ಸುರತ್ಕಲ್‌ನ ರಾಮಕ್ಷತ್ರಿಯ ಭಜನಾ ಸಂಘದಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 7ಕ್ಕೆ ವೃಂದಾವನ ಭಜನಾ ಮಂಡಳಿಯಿಂದ ಭಜನೆ ಹಾಗೂ ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.

ಅ.17ರಂದು ವಿಶೇಷ ಪೂಜೆ, ಪಾನಕ ಸೇವೆ

ಅ.17ರಂದು ಬೆಳಗ್ಗೆ 8ಕ್ಕೆ ಚಂಡಿಕಾಹೋಮ ನಡೆಯಲಿದೆ. ಶಿವಗಿರಿನಗರ, ಹೊಸಬೆಟ್ಟು, ಸುರತ್ಕಲ್‌ನ ಶ್ರೀ ಶಿವಾನಂದ ಬಾಬುಗುಡ್ಡೆ ಅವರು ಸೇವೆ ಸಲ್ಲಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಪಾನಕ ಪೂಜೆ (ಮುಡಿಪು ಪೂಜೆ) ನಡೆಯಲಿದೆ. ಬೆಳಗ್ಗೆ 11ಕ್ಕೆ ಕುಂಬಳೆಯ ರಾಮಕ್ಷತ್ರಿಯ ಭಜನಾ ಸಂಘ ಹಾಗೂ ಮಧ್ಯಾಹ್ನ 12ಕ್ಕೆ ಉಡುಪಿಯ ರಾಮಕ್ಷತ್ರಿಯ ಭಜನಾ ಸಂಘದ ನಗರ ಘಟಕದಿಂದ ಭಜನೆ ನಡೆಯಲಿದೆ.

ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 7ಕ್ಕೆ ಕೂಡ್ಲುವಿನ ಶ್ರೀ ಹರಿ ಭಜನಾ ಸಂಘದಿಂದ ಭಜನೆ ಮತ್ತು ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.

ಅ.18ರಂದು ದಸರಾ ಕವಿ ಸಮ್ಮೇಳನ, ಸಾಂಸ್ಕೃತಿಕ ವೈಭವ

ಅ.18ರಂದು ಬೆಳಗ್ಗೆ 8ಕ್ಕೆ ಎರಡು ಚಂಡಿಕಾಹೋಮಗಳು ನಡೆಯಲಿವೆ. ಬೇಕಲ್‌ರ್‌ಲೈನ್, ಕಕ್ಕೆಬೆಟ್ಟು, ಮಂಗಳೂರು ನಿವಾಸಿ ಶ್ರೀ ಸುಕೇಶ್ ಹಾಗೂ ಕೋಟೆಕಣಿ, ಕಾಸರಗೋಡಿನ ಶ್ರೀಮತಿ ಜಯಂತಿ ಬಿ.ಕೆ. ಲಕ್ಷ್ಮೀಶ ರಾವ್ ಅವರು ಸೇವೆ ಸಲ್ಲಿಸಲಿದ್ದಾರೆ.

ಬೆಳಗ್ಗೆ 10ಕ್ಕೆ ನಾಗರಕಟ್ಟೆ, ಕೊರಕೋಡು, ಕಾಸರಗೋಡಿನ ಶ್ರೀ ಶಾರದಾಂಭ ಭಜನಾಶ್ರಮದಿಂದ ಭಜನೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಕಾಸರಗೋಡು ದಸರಾ ಕವಿ ಸಮ್ಮೇಳನದ ಅಂಗವಾಗಿ ದಸರಾ ಕವಿಗೋಷ್ಠಿಯ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8ಕ್ಕೆ ಶ್ರೀ ಗುರುರಾಜ್ ಕಾಸರಗೋಡು ಅವರ ಸಾರಥ್ಯದ ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ‘ಸಾಂಸ್ಕೃತಿಕ ಕಲಾ ವೈಭವ’ ಕಲಾವಿದರ ಕಲರವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11ಕ್ಕೆ ಶ್ರೀ ಶಾರದಾಂಬ ಭಜನಾ ಸಂಘದಿಂದ ಭಜನೆ ಹಾಗೂ ಮಧ್ಯರಾತ್ರಿ 12ಕ್ಕೆ ಸರ್ವಾಲಂಕಾರ ಮಹಾಪೂಜೆ, ಅಗ್ನಿಸೇವೆ (ದೊಂದಿ ಸೇವೆ) ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಅ.19ರಂದು ದುರ್ಗಾನಮಸ್ಕಾರ, ಸಂಗೀತ ರಸಮಂಜರಿ

ಅ.19ರಂದು ಬೆಳಗ್ಗೆ ಭಜನಾ ಕಾರ್ಯಕ್ರಮದೊಂದಿಗೆ ದಿನದ ಕಾರ್ಯಕ್ರಮಗಳು ಆರಂಭವಾಗಲಿವೆ. ತಲ್ಲಾಣಿ, ಬೇಕಲಿನ ಶ್ರೀ ಗಣೇಶ ಶಾರದ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6ಕ್ಕೆ ಮಂಗಳೂರು ಅತ್ತಾವರದ ಶ್ರೀ ವೆಂಕಟೇಶ್ ಹಾಗೂ ಕುಟುಂಬಸ್ಥರ ಸೇವೆಯಲ್ಲಿ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ರಾತ್ರಿ 8ಕ್ಕೆ ಗಡಿನಾಡಿನ ಹಾಡುಹಕ್ಕಿ ವಸಂತ ಬಾರಡ್ಕ ಅವರ ‘ಶ್ರೀ ವಾರಿ ಮೆಲೊಡಿಸ್’ ವತಿಯಿಂದ ಸಂಗೀತ ರಸಮಂಜರಿ ಆಯೋಜಿಸಲಾಗಿದೆ.

ರಾತ್ರಿ 11.30ಕ್ಕೆ ಶ್ರೀ ಕ್ಷೇತ್ರ ಪಾಂಗೋಡು ಭಜನಾ ಸಂಘದವರಿಂದ ಭಜನೆ ನಡೆಯಲಿದ್ದು, ರಾತ್ರಿ 1ಕ್ಕೆ ಸರ್ವಾಲಂಕಾರ ಮಹಾಪೂಜೆ, ಮಹಾತಾಯಿಯ ದರ್ಶನ ಸೇವೆ (ಭದ್ರಕಾಳಿ ಸೇವೆ) ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಅ.20ರಂದು ವಿದ್ಯಾರಂಭದೊಂದಿಗೆ ಸಮಾಪನ

ನವರಾತ್ರಿ ಮಹೋತ್ಸವದ ಸಮಾರೋಪದ ದಿನವಾದ ಅ.20ರಂದು ಬೆಳಗ್ಗೆ 10ಕ್ಕೆ ಗ್ರಂಥಪೂಜೆ ಹಾಗೂ ವಿದ್ಯಾರಂಭ ನಡೆಯಲಿದೆ. ಬೆಳಗ್ಗೆ 11ಕ್ಕೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಸುಬ್ರಹ್ಮಣ್ಯ ಭಜನಾ ಸಂಘದವರಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ನಿತ್ಯ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯುವುದರೊಂದಿಗೆ ಹತ್ತು ದಿನಗಳ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.

ನವರಾತ್ರಿ ಮಹೋತ್ಸವದ ಎಲ್ಲ ಧಾರ್ಮಿಕ, ಭಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು–ಮನ–ಧನಗಳಿಂದ ಸಹಕರಿಸಿ ಶ್ರೀ ದುರ್ಗಾಪರಮೇಶ್ವರಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.