ಬಾರಕೂರಿನಲ್ಲಿ ದಸರಾ ಶಿಬಿರ; ಮಕ್ಕಳ ಆರೋಗ್ಯ ಕುರಿತು ಜಾಗೃತಿ

0
24

ಬಾರಕೂರು : ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶುಮಂದಿರ, ಬದನಗೋಳಿ ಹೊಸಾಳ, ರೋಟರಿ ಕ್ಲಬ್ ಬಾರಕೂರು, ಆರ್‌ಸಿಸಿ ಕ್ಲಬ್ ಬಾರಕೂರು ಹಾಗೂ ನಮ್ಮೂರು ಬಾರಕೂರು ಫೇಸ್‌ಬುಕ್‌ ಗ್ರೂಪ್‌ ಸಹಯೋಗದಲ್ಲಿ ದಸರಾ ಶಿಬಿರವನ್ನು ಅ.6ರಂದು ಬಾರಕೂರಿನ ರಥಬೀದಿಯ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಆಯೋಜಿಸಲಾಯಿತು.

ಶಿಬಿರದಲ್ಲಿ ಮಕ್ಕಳ ಆರೋಗ್ಯ ಕುರಿತು ವಿಶೇಷ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪದ್ಮಾ ಕ್ಲಿನಿಕ್, ಶೂರಾಡಿಯ ಡಾ. ಸುರೇಶ್ ಶೆಟ್ಟಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ರೋಟರಿ ಕ್ಲಬ್ ಬಾರಕೂರಿನ ಮಾಜಿ ಅಧ್ಯಕ್ಷ ರಾಜು ಟಿ. ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಣಿಕಂಠ ಪೂಜಾರಿ, ಮನೋಜ್ ಪೂಜಾರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶುಮಂದಿರ ಬಾರಕೂರು ಅಧ್ಯಕ್ಷ ಕೃಷ್ಣ ಜಿ. ಪೂಜಾರಿ , ಆರ್‌ಸಿಸಿ ಕ್ಲಬ್ ಬಾರಕೂರು ಅಧ್ಯಕ್ಷ ಅಮಿನೋ ಹಾಗೂ ರೋಟರಿ ಕ್ಲಬ್ ಬಾರಕೂರು ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ನಮ್ಮೂರು ಬಾರಕೂರು ಫೇಸ್‌ಬುಕ್‌ ಗ್ರೂಪ್‌ನ ಆನಂದ್ ಕುಮಾರ್ ಉಪಸ್ಥಿತರಿದ್ದರು.