ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಯುವ ಸಂಶೋಧಕ ಹಾಗೂ ನವೋದ್ಯಮಿ ದೀಪಕ್ ಎ. ಎಸ್. ಅವರು ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಮತ್ತೊಂದು ಸಂಶೋಧನಾ ಪ್ರಯತ್ನವನ್ನು ಮುಂದುವರಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ Antriksh Jigyasa – STEM Programme ವೇದಿಕೆಯ ANTRIKSH NAVACHARವಿಭಾಗದ ಮೂಲಕ “GITA SAT Rocket-Powered Small Satellite” ಎಂಬ ಯೋಜನೆಯನ್ನು ದೀಪಕ್ ಅವರು ಸಲ್ಲಿಸಿದ್ದಾರೆ.
ಅಧಿಕೃತ ಪೋರ್ಟಲ್‌ನ ಚಟುವಟಿಕೆ ಸ್ಥಿತಿ ದಾಖಲೆಯ ಪ್ರಕಾರ, ಯೋಜನೆಯನ್ನು 17 ಸೆಪ್ಟೆಂಬರ್ 2026ರಂದು ಸಲ್ಲಿಸಲಾಗಿದ್ದು, ಪ್ರಸ್ತುತ ಅದರ ಸ್ಥಿತಿ “ಪರಿಶೀಲನೆ ” ಎಂದು ತೋರಿಸುತ್ತಿದೆ.
ಈ ಯೋಜನೆಯ ಮೂಲಕ ಸಣ್ಣ ಉಪಗ್ರಹ ತಂತ್ರಜ್ಞಾನ ಮತ್ತು ಅಂತರಿಕ್ಷ ಸಂಶೋಧನೆಯತ್ತ ತಮ್ಮ ಆಸಕ್ತಿಯನ್ನು ಮತ್ತಷ್ಟು ಮುಂದುವರಿಸುವ ಉದ್ದೇಶವನ್ನು ದೀಪಕ್ ಹೊಂದಿದ್ದಾರೆ. ಈಗಾಗಲೇ ರಕ್ಷಣಾ ತಂತ್ರಜ್ಞಾನ, ಏರೋಸ್ಪೇಸ್, ರಾಕೆಟ್ ತಂತ್ರಜ್ಞಾನ ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸಂಶೋಧನೆ ನಡೆಸುತ್ತಿರುವ ಅವರು, Bharat Deepa – Defence & Space Research and Development India ಸಂಸ್ಥೆಯ ಸ್ಥಾಪಕ ಹಾಗೂ CEO ಆಗಿದ್ದಾರೆ.
ದೀಪಕ್ ಅವರ ಸಂಶೋಧನಾ ಪ್ರಯಾಣದಲ್ಲಿ ಈ ಸಲ್ಲಿಕೆಯು ಮತ್ತೊಂದು ಹಂತವಾಗಿದ್ದು, ಪರಿಕಲ್ಪನೆಯಿಂದ ಸಂಶೋಧನೆ, ಸಂಶೋಧನೆಯಿಂದ ತಾಂತ್ರಿಕ ಅಭಿವೃದ್ಧಿಎಂಬ ದಿಕ್ಕಿನಲ್ಲಿ ಮುಂದುವರಿಯುತ್ತಿರುವ ಪ್ರಯತ್ನದ ಭಾಗವಾಗಿದೆ.
ಯೋಜನೆಯು ಪ್ರಸ್ತುತ ಪರಿಶೀಲನೆಗಾಗಿ . ಮುಂದಿನ ನಿರ್ಧಾರವು ಸಂಬಂಧಿತ ಸಂಸ್ಥೆಯ ಪರಿಶೀಲನಾ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಯುವ ಮನಸ್ಸಿನಿಂದ ಅಂತರಿಕ್ಷದತ್ತ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಯುವ ಸಂಶೋಧಕ ದೀಪಕ್ ಅವರ ಪ್ರಯತ್ನವು, ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕರು ಸ್ವತಂತ್ರವಾಗಿ ಕಲಿತು ಸಂಶೋಧನಾ ಪರಿಕಲ್ಪನೆಗಳನ್ನು ರೂಪಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.
“ಕನಸು ಕಾಣುವುದಷ್ಟೇ ಅಲ್ಲ; ಆ ಕನಸನ್ನು ಸಂಶೋಧನಾ ಪರಿಕಲ್ಪನೆಯಾಗಿ ರೂಪಿಸಿ, ಸೂಕ್ತ ವೇದಿಕೆಯಲ್ಲಿ ಮಂಡಿಸುವುದು ಮತ್ತು ತಾಂತ್ರಿಕವಾಗಿ ಅಭಿವೃದ್ಧಿಪಡಿಸಿ ರಾಷ್ಟ್ರದಲ್ಲಿ ಅನುಷ್ಠಾನ ಮಾಡುವುದು ನನ್ನ ಗುರಿ,” ಎಂಬುದು ದೀಪಕ್ ಅವರ ಆಶಯ.

