ಉಡುಪಿ ವಿಭಾಗದಲ್ಲಿ Postman & MTS ನೌಕರರಿಂದ ಧರಣಿ

0
41

ಉಡುಪಿ : ರಾಷ್ಟ್ರೀಯ ಅಂಚೆ ವಲಯ ಸಂಘಟನೆ ಹಾಗೂ ಕೇಂದ್ರ ಸಂಘಟನೆಯ (Circle Union ಮತ್ತು CHQ) ಕರೆ ಮೇರೆಗೆ, ಉಡುಪಿ ವಿಭಾಗದ Postman ಹಾಗೂ MTS ನೌಕರರು ತಮ್ಮ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ (ಅ.6) ಕೆಲಸದ ಅವಧಿ ಮುಗಿದ ನಂತರ ಉಡುಪಿ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಶಾಂತಿಯುತವಾಗಿ ಧರಣಿ ಕಾರ್ಯಕ್ರಮ ನಡೆಸಿದರು.

ಧರಣಿ ಕಾರ್ಯಕ್ರಮವು ಸುಭಾಸ್ ತಿಂಗಳಾಯ, ವಿಭಾಗೀಯ ಕಾರ್ಯದರ್ಶಿ ಹಾಗೂ ವಲಯ ಸಹ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ Postman & MTS ಸಂಘದ ಅಧ್ಯಕ್ಷರಾದ ರಾಜೇಶ್ ಹಾಗೂ ಸಂಘದ ಪದಾಧಿಕಾರಿಗಳಾದ ಎನ್.ಎ. ನೇಜಾರ, ರಾಘವೇಂದ್ರ ಪ್ರಭು, ಪ್ರವೀಣ ನೇಜಾರ, ದಿನೇಶ್ ಶೇರಿಗಾರ, ಗಣೇಶ್ ಕುಲಾಲ್, ಸುರೇಶ್ ಕುಂದಾಪುರ, ಶಾಶ್ವತ್ ಕುಮಾರ್ ಹಾಗೂ ಗಣೇಶ್ ಪೈ ಲಕ್ಷಮಣ್ ಸೇರಿದಂತೆ ವಿಭಾಗದ ಎಲ್ಲಾ ಪೋಸ್ಟಮ್ಯನ್ ಹಾಗೂ ಎಂಟಿಎಸ್ ಸದಸ್ಯರು ಉಪಸ್ಥಿತರಿದ್ದರು.

ಅದೇ ರೀತಿ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಹಾಗೂ ಸಂಘದ ಸದಸ್ಯರು ಮತ್ತು ಸಂಘಟನೆಯ ಮಾಜಿ ಅಧ್ಯಕ್ಷರಾದ ಸುರೇಶ್ ಕೆ. ಅವರು ಧರಣಿಗೆ ಬೆಂಬಲ ಸೂಚಿಸಿ ಉಪಸ್ಥಿತರಿದ್ದರು.

ನೌಕರರ ಮೇಲೆ ಹೆಚ್ಚುತ್ತಿರುವ ಗುರಿ ಒತ್ತಡ, ಕೆಲಸದ ಒತ್ತಡ ಹಾಗೂ ವಿವಿಧ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಸೇರಿದಂತೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿಯಲ್ಲಿ ಒತ್ತಾಯಿಸಲಾಯಿತು.

ಧರಣಿಯಲ್ಲಿ Postman, MTS ಹಾಗೂ ಗ್ರಾಮೀಣ ಅಂಚೆ ನೌಕರರು ಒಗ್ಗಟ್ಟಿನಿಂದ ಭಾಗವಹಿಸಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಘಟನಾ ಬದ್ಧತೆಯನ್ನು ವ್ಯಕ್ತಪಡಿಸಿದರು.