ಖೋ ಖೋದಲ್ಲಿ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0
10

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ನರೇಂದ್ರ ಪದವಿಪೂರ್ವ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ ತೆಂಕಿಲ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಶಶಾಂಕ್, ಚಂದನ್, ದಿಶಾಲ್ ಎ., ಉದಯ್ ಎಸ್., ಥುಷನ್ ಎ., ತರುಣ್ ಎ. ರೈ, ಪ್ರದ್ವಿತ್ ರೈ ಎಂ., ಯಶ್ವಿನ್ ಬಿ., ಜೀವಿತ್, ಎಸ್. ಡಿ. ಮಸಲಿ ಹಾಗೂ ಪ್ರಿಥ್ವಿರಾಜ್ ಜಿ., ದ್ವಿತೀಯ ಪಿಯುಸಿಯ ತರುಣ್ ಕುಮಾರ್ ಬಿ.ಆರ್., ದೇಶ್ಚಿತ್ ಎಸ್., ಘನಶ್ಯಾಮ್, ಲಿಖಿತ್, ಕೀರ್ತನ್, ಸತ್ವಿಕ್ ಹಾಗೂ ಮಾನ್ವಿತ್ ಭಾಗವಹಿಸಿದ್ದರು.

ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯರಾದ ಸಂಗೀತ ಎಸ್.ಎಂ., ವಿನ್ಯಾ ರೈ, ಶ್ವೇತಶ್ರೀ, ಭೂಮಿಕಾ, ವೃಷ್ಟಿ ರೈ, ನಿದೀಕ್ಷ ಎ., ಪ್ರಣಿತಾ ಕೆ., ಹರ್ಷಿಣಿ, ವಿದ್ಯಾ ಎಂ., ಎಚ್.ಡಿ. ಹೇಮಾದ್ರಿ ಹಾಗೂ ಸಾನ್ವಿ ಅಂಚನ ವೈ.ವೈ., ದ್ವಿತೀಯ ಪಿಯುಸಿಯ ವಿಂದ್ಯಾ ಎಂ.ಆರ್., ನಳಿನ ಎ.ಬಿ. ಮತ್ತು ಅನನ್ಯ ಗೌಡ ಭಾಗವಹಿಸಿದ್ದರು.

ಪಂದ್ಯಾಟದಲ್ಲಿ ವೈಯಕ್ತಿಕ ಪ್ರಶಸ್ತಿಗಳಲ್ಲೂ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ದ್ವಿತೀಯ ವಾಣಿಜ್ಯ ವಿಭಾಗದ ದೇಶ್ಚಿತ್ ಎಸ್. ಅತ್ಯುತ್ತಮ ರಕ್ಷಕ, ಲಿಖಿತ್ ಅತ್ಯುತ್ತಮ ಸರ್ವಾಂಗೀಣ ಆಟಗಾರ ಹಾಗೂ ಪ್ರಥಮ ವಿಜ್ಞಾನ ವಿಭಾಗದ ವೃಷ್ಟಿ ರೈ ಅತ್ಯುತ್ತಮ ರಕ್ಷಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಅವರ ನೇತೃತ್ವದಲ್ಲಿ ತಂಡಕ್ಕೆ ತರಬೇತಿ ನೀಡಲಾಗಿತ್ತು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಾಲಕರ ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.