ಮಹಿಳೆಯರ ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವತಂತ್ರ ಬದುಕಿನ ಕನಸನ್ನು ನನಸಾಗಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಮಹತ್ವದ ಪಾತ್ರ ವಹಿಸಿದೆ.. ಶಿಕ್ಷಕಿ ಸಂಗೀತ ಶರ್ಮ
ಬಂಟ್ವಾಳ : ಮಹಿಳೆ ಒಂದು ಕುಟುಂಬದ ಆಧಾರಸ್ತಂಭ ಮಾತ್ರವಲ್ಲ, ಸಮಾಜದ ಅಭಿವೃದ್ಧಿಯ ಶಕ್ತಿಯೂ ಹೌದು. ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾದಾಗ ಕುಟುಂಬದಲ್ಲಿ ಸುಖ, ನೆಮ್ಮದಿ ಮತ್ತು ಭದ್ರತೆ ನೆಲೆಸುತ್ತದೆ. ಮಹಿಳೆಯರ ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವತಂತ್ರ ಬದುಕಿನ ಕನಸನ್ನು ನನಸಾಗಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಮಹತ್ವದ ಪಾತ್ರ ವಹಿಸುತ್ತಿದೆ.
ಮಹಿಳೆಯರನ್ನು ಕೇವಲ ಸಹಾಯ ಪಡೆಯುವವರನ್ನಾಗಿ ನೋಡದೆ, ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯವುಳ್ಳವರನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ ಎಂದರು.
ಅವರು ನವೆಂಬರ್ 22 ಭಾನುವಾರ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಶ್ರೀರಾಮ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಹಾಗೂ ಮೂರೂ ತಿಂಗಳ ಉಚಿತ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ನಿರ್ದೇಶಕರ ದಿನೇಶ್ ಜ್ಞಾನ ವಿಕಾಸ ಬೆಳೆದು ಬಂದ ರೀತಿ ಹಾಗೂ ಇದರ ಪ್ರಯೋಜನ ಹಾಗೂ ಯೋಜನೆಯ ಕಾರ್ಯಕ್ರಮ ದ ಬಗ್ಗೆ ಸಮಗ್ರ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ,ಒಕ್ಕೂಟ ಅಧ್ಯಕ್ಷ ರಘು ಪೂಜಾರಿ, ಟೈಲರಿಂಗ್ ಶಿಕ್ಷಕಿ ಜಲಜಾಕ್ಷಿ,
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ಸೇವಾಪ್ರತಿನಿಧಿ ವಸಂತಿ ಜ್ಞಾನ ವಿಕಾಸ ಅಧ್ಯಕ್ಷೆ ರಾಧಾ ಉಮ್ಮಕ್ಕ, ಜ್ಞಾನ ವಿಕಾಸ ಸದಸ್ಯರು ಉಪಸ್ಥಿತರಿದ್ದರು.

