ಮುಲ್ಕಿ: ಪ್ರಸಿದ್ಧ ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾತನಾಡಿ ಬಾಲಿವುಡ್ ನಟ ನಾನಾ ಪಾಟೇಕರ್ ಬಹು ಭಾಷಾ ನಟರಾಗಿ ಚಿತ್ರ ಪ್ರೇಮಿಗಳ ಮನ ಗೆದ್ದಿದ್ದರು ಅದರಲ್ಲೂ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಅವರ ಅಭಿನಯ ಅದ್ಭುತವಾಗಿತ್ತು.
ತಮ್ಮ ಜೊತೆ ನಾನಾ ಪಾಟೇಕರ್ ಒಡನಾಟ ಸ್ಮರಿಸಿಕೊಂಡ ಸ್ವಾಮೀಜಿ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದ್ದಾರೆ.
ನಾನಾ ಪಾಟೇಕರ್ ರವರು ಬಾಲಿವುಡ್ ಚಿತ್ರರಂಗದಲ್ಲಿ ಅತ್ಯುತ್ತಮ ನಟನೆಗಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವುದನ್ನು ಸ್ಮರಿಸಿಕೊಂಡ ಸ್ವಾಮೀಜಿ ಚಿತ್ರರಂಗದ ಜೊತೆಗೆ ಬಡವರಿಗೆ ಅವರ ಸಹಾಯ ಹಸ್ತ ನಿರಂತರವಾಗಿರುವುದು ಅವರ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ ಎಂದರು.
ನಾನಾ ಪಾಟೇಕರ್ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಐಕಳ ಬಾವ ಡಾ. ದೇವಿಪ್ರಸಾದ ಶೆಟ್ಟಿ ಬೆಳಪು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಭಾನುಮತಿ ಶೆಟ್ಟಿ ಕಕ್ವಗುತ್ತು, ಬಾಬಾ ರಂಜನ್ ಶೆಟ್ಟಿ ಮಜಲಗುತ್ತು ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ, ಮಾಜೀ ಅಧ್ಯಕ್ಷರಾದ ಗೋಪಿನಾಥ ಪಡಂಗ, ಡಾ. ಹರೀಶ್ಚಂದ್ರ ಪಿ ಸಾಲ್ಯಾನ್ , ಕಿಶೋರ್ ಶೆಟ್ಟಿ ಬಪ್ಪನಾಡು, ವಾಸು ಪೂಜಾರಿ ಚಿತ್ರಾಪು ಉದಯ ಕುಮಾರ್ ಶೆಟ್ಟಿ ಅಧಿಧನ್,ಶರತ್ ಕಾರ್ನಾಡ್ ಧರ್ಮಾನಂದ ಶೆಟ್ಟಿಗಾರ್, ಸುರೇಶ್ ಶೆಟ್ಟಿ ಶಿಮಂತೂರು ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

