-ಮಂದಾರ ರಾಜೇಶ್
ಕುಂದಾಪುರದ ಸ್ವರ್ಣನೂಪುರ ಯಕ್ಷಗಾನ ಮಂಡಳಿಯ 4ನೇ ವರ್ಷದ ವಾರ್ಷಿಕೋತ್ಸವ “ಯಕ್ಷ ಕಿನ್ನರ ಸಂಭ್ರಮ-2026” (‘ರಂಗ ತಾರ ಚಂದ್ರಮ’) ಕಾರ್ಯಕ್ರಮವು ಹಂಗಳೂರಿನ ಶ್ರೀ ಶನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಕ್ಟೋಬರ್ 4 ರಂದು ಅದ್ದೂರಿಯಾಗಿ ಜರುಗಿತು.

ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶರತ್ ರಾಜ್ ಆರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸೂಪರ್ ಗ್ರೇಟ್ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಕೆ. ಆರ್. ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗಣ್ಯರ ಉಪಸ್ಥಿತಿ
ದಿಕ್ಸೂಚಿ ಭಾಷಣವನ್ನು ಮುಖ್ಯಶಿಕ್ಷಕ ಅಬ್ದುಲ್ ರವೂಪ್ ನೆರವೇರಿಸಿದರು.
ವೇದಿಕೆಯಲ್ಲಿ ಎಸ್. ಸತೀಶ್ ಕುಮಾರ್, ಅಣ್ಣಯ್ಯ ಪೂಜಾರಿ, ನಾರಾಯಣ ಜಿ. ಗುನಗ, ಪಲ್ಲವಿಮಯ್ಯ ಹಾಲಾಡಿ, ಚಂದ್ರಹಾಸ ಜಿ. ಗುನಗ ಹಾಗೂ ಗಣೇಶ ಗುನಗ ಉಪಸ್ಥಿತರಿದ್ದರು.
ಸನ್ಮಾನ ಮತ್ತು ಪುರಸ್ಕಾರಗಳು
ಕೃಷ್ಣಾನಂದ್ ಶೆಣೈ ದಂಪತಿಗೆ “ಗೌರವ ಸನ್ಮಾನ”
ಶಶಾಂಕ್ ಪಟೇಲ್ ದಂಪತಿಗೆ “ಸ್ವರ್ಣ ನೂಪುರ ಪ್ರಶಸ್ತಿ”
ವಿಘ್ನೇಶ್ ದೇವಾಡಿಗ ದಂಪತಿಗೆ “ಗುರುವಂದನೆ” ಸಲ್ಲಿಸಲಾಯಿತು.
ಪ್ರತಿಭಾ ಪುರಸ್ಕಾರ
ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಕು. ಸಾನ್ವಿ ಶೆಟ್ಟಿ, ಕು. ದೀಕ್ಷಾ ಪೂಜಾರಿ ಹಾಗೂ ಕು. ವೈಷ್ಣವಿ ಶೆಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯಕ್ಷಗಾನ ಪ್ರಸ್ತುತಿ
ಸಭಾ ಕಾರ್ಯಕ್ರಮದ ನಂತರ ಸ್ವರ್ಣ ನೂಪುರ ಕೇಂದ್ರದ ವಿದ್ಯಾರ್ಥಿಗಳಿಂದ “ಹರಿಚಕ್ರ ವೈಭವಂ” ಹಾಗೂ “ಹರಶಕ್ತಿ ಕಲ್ಯಾಣ” ಎಂಬ ಎರಡು ಆಕರ್ಷಕ ಪೌರಾಣಿಕ ಯಕ್ಷಗಾನ ಪ್ರಸಂಗಗಳು ರಂಗಪ್ರಸ್ತುತಿಗೊಂಡು ರಸಿಕರ ಮನಸೂರೆಗೊಂಡವು.

